ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋಣ: ಅತ್ಯಾಚಾರ ಸಂತ್ರಸ್ತೆ ಮನೆಗೆ ಶಾಸಕ ಭೇಟಿ, ಸಾಂತ್ವನ

ರೋಣ: ಇತ್ತೀಚೆಗೆ ತಾಲೂಕಿನ ಅರಹುಣಸಿ ಗ್ರಾಮದ ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಪ್ರಕರಣ ನಡೆದಿತ್ತು. ಪ್ರಕರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತ ಬುದ್ಧಿಮಾಂದ್ಯ ಯುವತಿಯ ಮನೆಗೆ ಶಾಸಕ ಜಿ.ಎಸ್. ಪಾಟೀಲ ಭೇಟಿ ನೀಡಿ ಸಾಂತ್ವನ ಹೇಳಿ, ವೈಯಕ್ತಿಕವಾಗಿ 25,000 ರೂಪಾಯಿ ಸಹಾಯಧನ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್ಲ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಶಾಸಕ ಪಾಟೀಲ, ಸರ್ಕಾರದಿಂದ ಯುವತಿಯ ಕುಟುಂಬಕ್ಕೆ ಸಲ್ಲಬೇಕಾದ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡಲು ಕ್ರಮವಹಿಸಲಾಗುವುದು ಎಂದರು.

Edited By : Nagaraj Tulugeri
PublicNext

PublicNext

02/08/2026 01:29 pm

Cinque Terre

9.24 K

Cinque Terre

0

ಸಂಬಂಧಿತ ಸುದ್ದಿ