ಗದಗ: ನಗರದ ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ ಬೆಳ್ಳಂಬೆಳಿಗ್ಗೆ ಕಪ್ಪತ್ತಗುಡ್ಡಕ್ಕೆ ಭೇಟಿ ನೀಡಿ ಜಾಗೃತಿ ಅಭಿಯಾನ ನಡೆಸಿದರು.
ಕಪ್ಪತ್ತಗುಡ್ಡದ ವಿವಿಧ ಜಾಗಗಳಲ್ಲಿ ಪ್ರವಾಸಿಗರು ಎಸೆದ ಪ್ಲಾಸ್ಟಿಕ್ ಆಯ್ದು ಡಸ್ಟ್‌ಬಿನ್‌ಗೆ ಹಾಕಿದರು. ಈ ವೇಳೆ ಮಾತನಾಡಿದ ಅವರು, "ಪ್ರವಾಸಿಗರು ಕಪ್ಪತ್ತಗುಡ್ಡವನ್ನು ಮಲೀನ ಮಾಡದೆ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸಂಯಮದಿಂದ ವರ್ತಿಸಿ ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಮುಂದಾಗಬೇಕು. ಕಪ್ಪತ್ತಗುಡ್ಡ ನಮ್ಮ ಭಾಗದ ಅತ್ಯಮೂಲ್ಯ ಸ್ಥಳ. ಇಂತಹ ಔಷಧೀಯ ಸಸ್ಯಗಳ ತಾಣವನ್ನು ಮಲೀನ ಮಾಡದೆ ಶುದ್ಧವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ" ಎಂದು ತಿಳಿಹೇಳಿದರು.
"ಪರಿಸರಕ್ಕೆ ನಾವು ಮಾಡುವ ಅಪಚಾರ ತಾಯಿಗೆ ಮಾಡಿದ ಅಪಚಾರದಂತೆ" ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ವಿಡಿಯೋವೊಂದನ್ನು ಶ್ರೀಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶ್ರೀಗಳು ಭೇಟಿ ನೀಡಿದ್ದ ವೇಳೆ ಬೆಳ್ಳಂಬೆಳಿಗ್ಗೆ ಸುರಿದಿದ್ದ ಮಂಜು ಇಡೀ ಕಪ್ಪತ್ತಗುಡ್ಡ ಪರಿಸರವನ್ನು ಆವರಿಸಿದ್ದು ಮನಮೋಹಕವಾಗಿತ್ತು.
PublicNext
28/07/2026 01:11 pm
LOADING...