ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಡರಗಿ: ಶಾಸಕರ ಜನಸಂಪರ್ಕ ಕಚೇರಿ ಪ್ರಾರಂಭಕ್ಕೆ ಆಗ್ರಹಿಸಿ ಪ್ರತಿಭಟನೆ; ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಚಂದ್ರು ಲಮಾಣಿ

ಮುಂಡರಗಿ: ಮುಂಡರಗಿ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿರುವ ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರ ಜನಸಂಪರ್ಕ ಕಚೇರಿ ಪ್ರಾರಂಭಕ್ಕೆ ಆಗ್ರಹಿಸಿ ನಿನ್ನೆ ವಿಶ್ವಕನ್ನಡ ರಕ್ಷಣಾ ವೇದಿಕೆ ಪ್ರತಿಭಟನೆ ಆರಂಭಿಸಿತ್ತು.

ಮಾಹಿತಿ ತಿಳಿದು ಇಂದು ಸ್ಥಳಕ್ಕೆ ಆಗಮಿಸಿದ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, "ನಮ್ಮ ಕಚೇರಿ ತಾಲೂಕಿನಲ್ಲಿ ಬೇರೆ ಕಡೆ ಇದೆ. ಜನಸಂಪರ್ಕಕ್ಕಾಗಿಯೇ ಕಚೇರಿಯನ್ನು ಬಾಡಿಗೆಗೆ ಪಡೆಯಲಾಗಿದೆ. ತಾಲೂಕು ಪಂಚಾಯತ್ ಆವರಣದಲ್ಲಿರುವುದು ಸಭೆ, ಸಮಾರಂಭಗಳಿಗೆ ಬಂದಾಗ ಕೂರುವ ವ್ಯವಸ್ಥೆಗಾಗಿ," ಎಂದು ಮಾಹಿತಿ ನೀಡಿ ಪ್ರತಿಭಟನಾ ಸ್ಥಳದಲ್ಲಿಯೇ ಮುಂಡರಗಿ ಪಟ್ಟಣದ ವಿವಿಧ ವಾರ್ಡ್‌ಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದರು.

ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಬೆಣ್ಣೆ ಸೇರಿದಂತೆ ಇತರರಿದ್ದರು.

Edited By : Somashekar
PublicNext

PublicNext

04/08/2026 02:41 pm

Cinque Terre

7.37 K

Cinque Terre

0

ಸಂಬಂಧಿತ ಸುದ್ದಿ