ಮುಂಡರಗಿ: ಪಟ್ಟಣದಿಂದ ಕೇವಲ 10 ಕಿಲೋಮೀಟರ್ ಅಂತರದಲ್ಲಿ ತುಂಗಭದ್ರಾ ನದಿ ಹರಿಯುತ್ತದೆ. ಸದ್ಯ ನದಿಗೆ ನೀರು ಬಿಟ್ಟಿರುವುದರಿಂದ ತುಂಗಭದ್ರೆ ಸಂಪೂರ್ಣ ತುಂಬಿ ಹರಿಯುತ್ತಿದ್ದಾಳೆ. 3.17 ಟಿಎಂಸಿ ಸಾಮರ್ಥ್ಯದ ಹಮ್ಮಿಗಿ ಬ್ಯಾರೇಜ್ ಸಹ ಭರ್ತಿಯಾಗಿದೆ. ಆದರೂ ಈವರೆಗೆ ಪಟ್ಟಣಕ್ಕೆ ಕುಡಿಯುವ ನೀರಿನ ಭಾಗ್ಯ ಇಲ್ಲವಾಗಿದೆ.
ಸದ್ಯ ಇರುವ ಸಮಗ್ರ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿಯ ನೀರು ಪಟ್ಟಣಕ್ಕೆ ಸಾಕಾಗುತ್ತಿಲ್ಲ. ಪುರಸಭೆ ವ್ಯಾಪ್ತಿಯಲ್ಲಿ 35 ಸಾವಿರ ಜನಸಂಖ್ಯೆಯಿದ್ದು, ನೀರಿನ ಬೇಡಿಕೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
2018ರಲ್ಲಿ ₹17.43 ಕೋಟಿ ವೆಚ್ಚದಲ್ಲಿ ಶುರುವಾಗಿದ್ದ DBTO ಯೋಜನೆ ಗುತ್ತಿಗೆದಾರರ ವಿಳಂಬ ನೀತಿಯಿಂದಾಗಿ ರದ್ದುಗೊಂಡಿತು. ಇದು ಸಮಸ್ಯೆಯ ತೀವ್ರತೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಹೀಗಾಗಿ ಮುಂಡರಗಿಗೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆ ಕೈಗೂಡಲೇ ಇಲ್ಲ.
ಹಮ್ಮಿಗಿ ಬ್ಯಾರೇಜಿನಿಂದ ಗದಗ ನಗರಕ್ಕೆ ಪ್ರತ್ಯೇಕವಾಗಿ ಕುಡಿಯುವ ನೀರಿನ ಯೋಜನೆಯಿದೆ. ಹಾಗೆಯೇ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣಕ್ಕೂ ಇಲ್ಲಿಂದಲೇ ಕುಡಿಯುವ ನೀರು ಸರಬರಾಜಾಗುತ್ತದೆ. ಆದರೆ, ನದಿ ಹರಿಯುವ ಮುಂಡರಗಿ ತಾಲೂಕಿಗೇ ಕುಡಿಯುವ ನೀರಿನ ಪ್ರತ್ಯೇಕ ಯೋಜನೆ ಇಲ್ಲದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
PublicNext
04/08/2026 03:06 pm
LOADING...