ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಡರಗಿ: ತುಂಗಭದ್ರೆ ಹರಿವು ಹೆಚ್ಚಳ; ಧ್ವನಿವರ್ಧಕದಿಂದ ಜಾಗೃತಿ ಸಂದೇಶ

ಮುಂಡರಗಿ: ತಾಲೂಕಿನ ತುಂಗಭದ್ರ ನದಿ ಪಾತ್ರದ ಗ್ರಾಮಗಳಾದ ಬಿದರಹಳ್ಳಿ ಹಾಗೂ ವಿಠಲಾಪುರ ಗ್ರಾಮದಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಯಿತು. ತಾಲೂಕು ಪಂಚಾಯತಿ ಆದೇಶದ ಮೇರೆಗೆ ಗ್ರಾಮ ಪಂಚಾಯತ್ ಈ ಕ್ರಮ ಕೈಗೊಂಡಿದೆ.

ಈಗಾಗಲೇ ನೀರು ಬಿಟ್ಟಿರುವ ತುಂಗಭದ್ರ ನದಿ ಹರಿವಿನ‌ ಪಾತ್ರಗಳಿಗೆ ಹೊಂದಿಕೊಂಡಿರುವ ಬಿದರಹಳ್ಳಿ ಹಾಗೂ ವಿಠಲಾಪುರ ಗ್ರಾಮದ ಜನರು ನದಿಪಾತ್ರಗಳಿಗೆ ಇಳಿಯದಂತೆ ಮುಂಜಾಗ್ರತೆ ವಹಿಸಬೇಕು. ಜಾನುವಾರುಗಳನ್ನು ನದಿ ದಡದಲ್ಲಿ ಬಿಡದೆ ಮುನ್ನೆಚ್ಚರಿಕೆ ಕ್ರಮವಾಗಿ ಎಚ್ಚರದಿಂದ ಇರಬೇಕು ಎಂದು ಜನನಿಬಿಡ ಪ್ರದೇಶವಾದ ಗ್ರಾಮದ ತರಕಾರಿ ಸಂತೆ ಪ್ರಾಂಗಣದಲ್ಲಿಯೇ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಯಿತು.

Edited By : Somashekar
PublicNext

PublicNext

02/08/2026 08:27 pm

Cinque Terre

15.14 K

Cinque Terre

0

ಸಂಬಂಧಿತ ಸುದ್ದಿ