ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಊರಿಗೆ ಊರೇ ಖುಷಿಯಲ್ಲಿ

ತುಮಕೂರು : ತುಮಕೂರಿನ ಮನೆಯೊಂದರಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು.. ಇಡೀ ಹಳ್ಳಿಯ ಜನರೇ ಮುಂದೆ ನಿಂತು ಸೀಮಂತ ಕಾರ್ಯಕ್ರಮ ಸಂಭ್ರಮದಲ್ಲಿದ್ದಾರೆ. ಇದರಲ್ಲೇನು ವಿಶೇಷ ಅಂತ ಸ್ಥಳಕ್ಕೋಗಿ ನೋಡಿದವ್ರಿಗೆ ಆಶ್ಚರ್ಯ ಹಾಗೂ ವಿಸ್ಮಯ ಕಾದಿತ್ತು. ಹೌದು, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತೋಟಸಾಗರ ಗ್ರಾಮದ ರೈತ ಕರೇಗೌಡರ ಮನೆಯ 'ಲಕ್ಷ್ಮಿ' ಎಂಬ ಹಸುವಿಗೆ ಸಡಗರ-ಸಂಭ್ರಮದಿಂದ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಮನೆಯಲ್ಲಿ ಹೋಳಿಗೆಯ ಸಿಹಿ ಊಟ ಮಾಡಿ ಗ್ರಾಮಕ್ಕೆಲ್ಲಾ ಊಟ ಹಾಕಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಗ್ರಾಮಸ್ಥರು ಹಸು ಲಕ್ಷ್ಮಿಗೆ ವಿಶೇಷ ಪೂಜೆ, ಆರತಿ, ಮಡಿಲು ತುಂಬುವ ಕೆಲಸವನ್ನು ಮಾಡಿದ್ರು. ಹಸುವಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಸಂಭ್ರಮ ಪಟ್ಟಿದ್ದಾರೆ. ಒಬ್ಬ ಗರ್ಭಿಣಿ ಸ್ತ್ರೀಗೆ ಸೀಮಂತ ಮಾಡುವ ರೀತಿಯಲ್ಲೇ ಕಾರ್ಯಕ್ರಮ ಮಾಡಿರೋದು ಎಲ್ಲರ ಕಣ್ಮನ ಸೆಳೆದಿದೆ.

Edited By :
PublicNext

PublicNext

30/07/2026 12:47 pm

Cinque Terre

4.3 K

Cinque Terre

0