ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಇಲಿಗೂ ಸ್ವರ್ಣ ವ್ಯಾಮೋಹ!? ಜ್ಯುವೆಲ್ಲರಿ ಶಾಪ್ ನಿಂದ 10 ಲಕ್ಷ ಮೌಲ್ಯದ ಚಿನ್ನ ಎಗರಿಸಿದ ಮೂಷಿಕ

ತುಮಕೂರು: ಸಿನಿಮಾ ಕಥೆಯನ್ನೂ ಮೀರಿಸುವಂತಿದೆ ಈ ಕಹಾನಿ...ಯಾವುದೇ ರೀತಿಯಲ್ಲೂ  ಶಟರ್ ಮುರಿದಿಲ್ಲ.. ಶಾಪ್ ಒಳಗೆ ಯಾರ ಪ್ರವೇಶವೂ ಇಲ್ಲ..ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನ ಹಾಗೂ ವಜ್ರದ ಆಭರಣ ಮಾಯವಾಗಿವೆ!

ತುಮಕೂರು ನಗರದ ಕಾಲ್ಟೆಕ್ಸ್ ಬಳಿ ಇರುವ ವಿಶ್ವಾಸ್ ಜ್ಯುವೆಲ್ಲರಿ ಶಾಪ್ ನಲ್ಲಿ ಸರಿಸುಮಾರು 50 ಗ್ರಾಂ ಗೂ ಅಧಿಕ ವಜ್ರ ಹಾಗೂ ಚಿನ್ನಾಭರಣ ನಾಪತ್ತೆಯಾಗಿತ್ತು. ಆದರೆ, ಚಿನ್ನ ಕಳುವಾಗಿದ್ದಾದರೂ ಹೇಗೆ? ಅದೂ ಸಹ ಶಾಪ್ ನಲ್ಲಿ  10 ಲಕ್ಷ ಮೌಲ್ಯದ ಸರಗಳು, ಉಂಗುರಗಳು.. ಮಂಗಮಾಯ! ಅದನ್ನು ಮಾಯ ಮಾಡಿರುವುದಾದರೂ ಯಾರೆಂದು ಗೊತ್ತಾದ ತಕ್ಷಣ ಸಿಬ್ಬಂದಿ ಹಾಗೂ ಮಾಲೀಕರು ಕಂಗಾಲಾಗಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವ ಮುನ್ನ ಸಿಸಿ ಟಿವಿ ಪರಿಶೀಲಿಸಿದಾಗ ಮಾಲೀಕ ಸಹಿತ ಸಿಬ್ಬಂದಿ ಶಾಕ್ ಆಗಿದ್ದಾರೆ.

ಇಲಿಯೊಂದರ ಕೃತ್ಯಕ್ಕೆ ಜ್ಯುವೆಲ್ಲರಿ ಶಾಪ್ ಸಿಬ್ಬಂದಿ ಹಾಗೂ ಮಾಲೀಕ ಥಂಡ ಹೊಡೆದಿದ್ದಾರೆ. ಸೈಲೆಂಟಾಗಿ ಎಂಟ್ರಿ ಕೊಟ್ಟು 10 ಲಕ್ಷ ಮೌಲ್ಯದ ಆಭರಣಗಳನ್ನು ಅದೊಂದು ಇಲಿ ಎಗರಿಸಿತ್ತು. ವಜ್ರಾಭರಣ ಎಗರಿಸಿ ತನ್ನ ಬಿಲದಲ್ಲಿಟ್ಟಿತ್ತು.

'ಕಳ್ಳ ಇಲಿ'ಯ ಕೃತ್ಯ ಸಂಪೂರ್ಣವಾಗಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಬಳಿಕ ಇಲಿಯ ಜಾಡು ಹಿಡಿದ ಜ್ಯುವೆಲ್ಲರಿ ಶಾಪ್ ಸಿಬ್ಬಂದಿ, ಬಿಲ ತೋಡಿದಾಗ ಚಿನ್ನಾಭರಣ ಪತ್ತೆಯಾಗಿದೆ.

ಬರೋಬ್ಬರಿ 10 ರಿಂಗ್, 3 ಸರ ಎತ್ತಿದ್ದ ಚಾಲಾಕಿ ಇಲಿಯ 'ಕಳ್ಳತನ' ಬಯಲಾಗಿದ್ದು, ಆಭರಣ ಸಿಕ್ಕ ಬಳಿಕ ಜ್ಯುವೆಲ್ಲರಿ ಶಾಪ್ ಮಾಲೀಕ ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

Edited By : Manjunath H D
PublicNext

PublicNext

30/07/2026 10:45 pm

Cinque Terre

17.98 K

Cinque Terre

0