ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ — ಸಂಘಗಳ ಸಮರ್ಪಕ ನಿರ್ವಹಣೆಗೆ ಮಾರ್ಗದರ್ಶನ

ಕಲಬುರಗಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಂದಗಿ ಯೋಜನಾ ಕಚೇರಿ ವತಿಯಿಂದ ಆಲಮೇಲ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ಗುರುವಾರ ಆಲಮೇಲದ ವಿರಕ್ತಮಠದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಮೋಹನ್ ನಾಯ್ಕ್, ಯೋಜನಾಧಿಕಾರಿ ಬಿನೋಯ್, ಜಿಲ್ಲಾ ವಿಚಕ್ಷಣಾಧಿಕಾರಿ ಶ್ರೀಕಾಂತ್ ಹಾಗೂ ಜಿಲ್ಲಾ ಬಿ.ಸಿ. ಪ್ರಬಂಧಕ ಸಂತೋಷ್ ಅವರು ಭಾಗವಹಿಸಿ ಮಾರ್ಗದರ್ಶನ ನೀಡಿದರು.

ತರಬೇತಿ ವೇಳೆ ಒಕ್ಕೂಟದ ಪದಾಧಿಕಾರಿಗಳಿಗೆ ಕ್ಷೇತ್ರದ ಹಿನ್ನೆಲೆ, ಸಂಘಗಳ ಸಮರ್ಪಕ ನಿರ್ವಹಣೆ, ಯೋಜನೆಯ ವಿವಿಧ ಕಾರ್ಯಕ್ರಮಗಳು, ಒಕ್ಕೂಟ ಸಭೆಗಳ ಮಹತ್ವ ಹಾಗೂ ಬ್ಯಾಂಕಿನ ಬಿ.ಸಿ. ಕಾರ್ಯಕ್ರಮದ ಕುರಿತು ವಿವರವಾದ ಮಾಹಿತಿ ನೀಡಲಾಯಿತು. ಜೊತೆಗೆ ಒಕ್ಕೂಟ ಸಭೆಯ ಪ್ರಾತ್ಯಕ್ಷಿಕೆಯನ್ನು ನಡೆಸಿ ಪದಾಧಿಕಾರಿಗಳಿಗೆ ಪ್ರಾಯೋಗಿಕ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡರು.

Edited By : Nirmala Aralikatti
Kshetra Samachara

Kshetra Samachara

30/07/2026 06:12 pm

Cinque Terre

1.58 K

Cinque Terre

0

ಸಂಬಂಧಿತ ಸುದ್ದಿ