ಸಿದ್ದಾಪುರ : ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನ ಪೀಠದ 1008 ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು 48 ದಿನದ ಚಾತುರ್ಮಾಸವನ್ನು ಬೈಂದೂರಿನಲ್ಲಿ ಹಮ್ಮಿಕೊಂಡಿದ್ದು ಆಗಸ್ಟ್ 22 ರಂದು ಸಿದ್ದಾಪುರ ತಾಲೂಕಿನ ಸಮಸ್ತ ನಾಮಧಾರಿ ಬಂಧುಗಳು ಪೂಜ್ಯ ಗುರುಗಳನ್ನು ಭೇಟಿಯಾಗಿ ಪಾದಪೂಜೆ ಹಾಗೂ ಗುರು ಕಾಣಿಕೆಯನ್ನು ಸಲ್ಲಿಸುವುದಾಗಿ ನಿಶ್ಚಯಿಸಿರುತ್ತೇವೆ ಆದ್ದರಿಂದ ಎಲ್ಲಾ ನಾಮಧಾರಿ ಸಮುದಾಯದವರು ಆ ದಿನ 12 ಗಂಟೆ ಒಳಗೆ ನಮ್ಮೊಂದಿಗೆ ಅಲ್ಲಿಗೆ ಬಂದು ಗುರುಸೇವೆಯನ್ನು ಮಾಡಿ ಆಶೀರ್ವಾದವನ್ನು ಪಡೆಯಬೇಕೆಂದು ತಾಲೂಕ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ ನಾಯ್ಕ್ ಹಣಜಿಬೈಲ್ ರವರು ಕರೆ ನೀಡಿದರು.
ಸಿದ್ದಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಅವರು ಮಾತನಾಡಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಜುಲೈ 29ರ ಗುರುಪೂರ್ಣಿಮೆಯ ದಿನದಂದು ಗುರುಗಳು ಅದ್ದೂರಿಯಾದ ಮೆರವಣಿಗೆಯಲ್ಲಿ ಬೈಂದೂರಿನ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನ ಗೋಳಿಹೊಳೆಯಲ್ಲಿ ಮೃತಾಚರಣೆ ಆರಂಭಿಸಿದ್ದಾರೆ, ಗುರುಗಳು ಈ ಹಿಂದೆ ಎಲ್ಲೆಲ್ಲಿ ಚಾತುರ್ಮಾಸ ವೃತಾಚರಣೆ ಮಾಡಿದರೋ ಅಲ್ಲಿ ಎಲ್ಲ ಕಡೆ ಭೇಟಿ ನೀಡಿ ತಾಲೂಕ ನಾಮಧಾರಿ ಸಮಾಜದ ಪರವಾಗಿ ಸೇವೆ ಸಲ್ಲಿಸಿದ್ದೇವೆ, ಈ ಕಾರ್ಯಕ್ರಮದಲ್ಲೂ ಕೂಡ ಸಮಾಜದ ಪರವಾಗಿ ಗುರು ಕಾಣಿಕೆಯನ್ನು ಸಲ್ಲಿಸಲಿದ್ದೇವೆ ಹಾಗಾಗಿ ಸಮಾಜದ ಎಲ್ಲಾ ಬಾಂಧವರು ನಮ್ಮೊಂದಿಗೆ ಹಾಜರಿರಬೇಕೆಂದು ವಿನಂತಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಆನಂದ ನಾಯ್ಕ್, ಉಪಾಧ್ಯಕ್ಷರಾದ ಕೆ ಜಿ ನಾಗರಾಜ, ವಿ.ಎನ್ ನಾಯ್ಕ್, ಕಾರ್ಯದರ್ಶಿ ಎಸ್ಎಂ ನಾಯ್ಕ್, ಸಹ ಕಾರ್ಯದರ್ಶಿ ಪ್ರವೀಣ ನಾಯ್ಕ, ಪದಾಧಿಕಾರಿಗಳಾದ ಮಹಾಬಲೇಶ್ವರ ನಾಯ್ಕ್, ಸದಸ್ಯರುಗಳಾದ ಮಾರುತಿ ನಾಯ್ಕ್ ಜಿ ಐ ನಾಯ್ಕ್, ಎ.ಜಿ ನಾಯ್ಕ್, ರವಿಕುಮಾರ ನಾಯ್ಕ್, ನಾಗರಾಜ ನಾಯ್ಕ್, ಸುಧೀರ ನಾಯ್ಕ್, ನೇತ್ರಾವತಿ ನಾಯ್ಕ್, ಶಿಲ್ಪ ನಾಯ್ಕ್, ಗಜಾನನ ನಾಯ್ಕ್, ಶ್ರೀಧರ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
31/07/2026 10:30 pm
LOADING...