ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ; ಕಣ್ಮನ ಸೆಳೆದ ಸಸ್ಯ ಸಂತೆ; ಖುಷಿ ಪಟ್ಟ ಕೃಷಿಕರು

ಹಾವೇರಿ: ಹಾವೇರಿ ತಾಲೂಕು ದೇವಿಹೊಸೂರು ತೋಟಗಾರಿಕೆ ಸಂಶೋಧನೆ ಕೇಂದ್ರದಲ್ಲಿ 'ಸಸ್ಯ ಸಂತೆ' ಎಂಬ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದೇವಿಹೊಸೂರ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರ ಹಾಗೂ ದಾನವೀರ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ತೋಟಗಾರಿಕೆ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಸಸ್ಯ ಸಂತೆ ಆಯೋಜನೆ ಮಾಡಲಾಗಿತ್ತು.

ಸಸ್ಯ ಸಂತೆ ಪ್ರದರ್ಶನದಲ್ಲಿ ವಿವಿಧ ಬಗೆಯ/ಜಾತಿಯ ತೋಟಗಾರಿಕೆ ಸಸಿಗಳು, ಬೀಜಗಳು, ಜೈವಿಕ ಕೀಟನಾಶಕಗಳು, ತೋಟಗಾರಿಕೆ ಮೌಲ್ಯವರ್ಧಿತ ಉತ್ಪನ್ನಗಳನ್ನು, ತಾಂತ್ರಿಕ ಸಲಹೆಗಳನ್ನು ರೈತರಿಗೆ ನೀಡಲಾಯಿತು.

ಜಿಲ್ಲೆಯಾದ್ಯಂತ ಸಾವಿರಾರು ರೈತರು ಸಸ್ಯ ಸಂತೆಯಲ್ಲಿ ಪಾಲ್ಗೊಂಡು ತಮಗೆ ಬೇಕಾದ ಮಾಹಿತಿ ಪಡೆದರು.

ಪ್ರದರ್ಶನದಲ್ಲಿ ರೈತರಿಗೆ ಅನುಕೂಲಕರವಾಗುವ ತೆಂಗು, ಅಡಿಕೆ, ಮಾವು, ನುಗ್ಗೆಕಾಯಿ, ಕರಿಬೇವು, ಮಹಾಘನಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

Edited By :
PublicNext

PublicNext

01/08/2026 09:28 am

Cinque Terre

11 K

Cinque Terre

0

ಸಂಬಂಧಿತ ಸುದ್ದಿ