ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಮಳಗಿಯ ಯಮಗೋಡು (ಯಮಗೋಳ್ಳಿ) ಡ್ಯಾಂ ತುಂಬಿ ಕೋಡಿ ಬಿದ್ದಿದೆ. ಪರಿಣಾಮ ಹಾವೇರಿ ಜಿಲ್ಲೆಯ ಧರ್ಮಾ ನದಿಗೆ ಜೀವಕಳೆ ಬಂದಿದೆ.
ಧರ್ಮಾ ನದಿ ಮೈದುಂಬಿ ಹರಿಯಲಾರಂಭಿಸಿದ್ದು, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಂಚಿನಗಳೂರು ಗ್ರಾಮದಲ್ಲಿ ಮಿನಿ ಜಲಪಾತಗಳನ್ನು ಸೃಷ್ಟಿಸಿದೆ. ಧರ್ಮಾ ನದಿಗೆ ಕಟ್ಟಲಾಗಿರುವ ಚೆಕ್ ಡ್ಯಾಂ (ವಡ್ಡು) ಭರ್ತಿಯಾದ ನಂತರ ನೀರಿನಿಂದ ಮೂರು ಸಣ್ಣ ಜಲಪಾತಗಳು ಮೈದಳೆದಿವೆ.
ಈ ದೃಶ್ಯ ನಯನಮನೋಹರವಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸುಮಾರು 10 ಮೀಟರ್ ಎತ್ತರದಿಂದ ದುಮುಕುವ ನದಿಯ ರಭಸದ ಸದ್ದು ಕಿವಿಗೆ ಇಂಪಾಗಿದೆ.
PublicNext
05/08/2026 12:32 pm
LOADING...