ವರದಾ ನದಿಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮವಾಗಿ ಹಾವೇರಿ ಜಿಲ್ಲೆಯಲ್ಲಿ ವರದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್ ಜಲಾವೃತಗೊಂಡಿದೆ. ಇದರ ಪರಿಣಾಮವಾಗಿ ಕಳಸೂರು, ಹತ್ತಿಮತ್ತೂರು, ಮಂಟಗಣಿ ಸೇರಿದಂತೆ ಹಲವು ಗ್ರಾಮಗಳು ದೇವಗಿರಿಯಿಂದ ಸಂಪರ್ಕ ಕಳೆದುಕೊಂಡಿವೆ.
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಹಾವೇರಿ ನಗರಕ್ಕೆ, ಹಾಗೆಯೇ ಹಾವೇರಿಯಿಂದ ಹುಬ್ಬಳ್ಳಿಯ ಕಡೆಗೆ ಹೋಗಲು ಈ ಗ್ರಾಮಗಳಿಗೆ ಈ ಸೇತುವೆಯೇ ಪ್ರಮುಖ ಆಧಾರವಾಗಿತ್ತು. ಇದೀಗ ಈ ಬ್ರಿಡ್ಜ್ ಜಲಾವೃತಗೊಂಡಿದ್ದು, ಈ ಭಾಗದ ಜನರು ಸುತ್ತುಬಳಸಿ ಓಡಾಡುವಂತಾಗಿದೆ. ಪ್ರತಿ ಮಳೆಗಾಲದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಸೇತುವೆಯ ಎತ್ತರ ಹೆಚ್ಚಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
PublicNext
04/08/2026 04:27 pm
LOADING...