ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಸ್ವಾತಂತ್ರ್ಯ ದಿನಾಚರಣೆಗೆ ಗಾಂಧೀಜಿ ಪುತ್ಥಳಿ ಅನಾವರಣಗೊಳ್ಳುವುದೇ?

ಹಾವೇರಿ: ನಗರದ ಹೃದಯಭಾಗದಲ್ಲಿರುವ ಗಾಂಧೀಜಿ ವೃತ್ತದ ಮಹಾತ್ಮ ಗಾಂಧೀಜಿ ಪುತ್ಥಳಿ ಹಾಳಾಗಿ 104 ದಿನಗಳು ಕಳೆದಿವೆ. ಏಪ್ರಿಲ್ 20ರ ಮುಂಜಾನೆ ಮಾನಸಿಕ ಅಸ್ವಸ್ಥನೊಬ್ಬ ಮಹಾತ್ಮ ಗಾಂಧೀಜಿ ಪುತ್ಥಳಿಯನ್ನು ವಿರೂಪಗೊಳಿಸಿ ಕೆಳಗೆ ಬೀಳಿಸಿದ್ದ.

ನಗರಸಭೆಯ ಸುಪರ್ದಿಯಲ್ಲಿದ್ದ ಪುತ್ಥಳಿ ವಿರೂಪಗೊಂಡ ಹಿನ್ನೆಲೆಯಲ್ಲಿ ಹೊಸ ಪುತ್ಥಳಿಯನ್ನು ಸ್ಥಾಪಿಸಲಾಗುವುದು ಎಂದು ಹಾವೇರಿ ನಗರಸಭೆ ತಿಳಿಸಿತ್ತು. ಆದರೆ ಗಾಂಧೀಜಿ ವೃತ್ತದಲ್ಲಿ ಪುತ್ಥಳಿ ಇಲ್ಲದೆ ಸುಮಾರು 104 ದಿನಗಳು ಕಳೆದಿವೆ.

ಪುತ್ಥಳಿ ಸ್ಥಾಪಿಸುವ ಭರವಸೆ ನೀಡಿದ್ದ ನಗರಸಭೆ ಅಧಿಕಾರಿಗಳು ಇದುವರೆಗೂ ಅದನ್ನು ಮರುಸ್ಥಾಪಿಸಿಲ್ಲ ಎಂದು ಗಾಂಧಿವಾದಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಆಗಸ್ಟ್ 15ರೊಳಗಾದರೂ ಪುತ್ಥಳಿ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಾವೇರಿ ನಗರಸಭೆ ಪೌರಾಯುಕ್ತ ಕಾಂತರಾಜು, ಆದಷ್ಟು ಬೇಗ ಪುತ್ಥಳಿ ಸ್ಥಾಪಿಸುವ ಭರವಸೆ ನೀಡಿದ್ದಾರೆ.

Edited By :
PublicNext

PublicNext

03/08/2026 12:06 pm

Cinque Terre

13.51 K

Cinque Terre

0

ಸಂಬಂಧಿತ ಸುದ್ದಿ