ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ವಿನಯ್ ಕುಲಕರ್ಣಿಗೆ ಜಾಮೀನು — ಪಟಾಕಿ ಸಿಡಿಸಿ ಅಭಿಮಾನಿಗಳಿಂದ ವಿಜಯೋತ್ಸವ!

ಶಿಗ್ಗಾವಿ: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಶಿಗ್ಗಾವಿ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.

ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಿರುವ ಹೈಕೋರ್ಟ್, ₹5 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಭದ್ರತೆಯೊಂದಿಗೆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅನುಮತಿಸಿದೆ. ಈ ಹಿನ್ನೆಲೆಯಲ್ಲಿ ಶಿಗ್ಗಾವಿಯಲ್ಲಿ ಅವರ ಅಭಿಮಾನಿಗಳು ಜಯಘೋಷಗಳನ್ನು ಕೂಗಿ ವಿಜಯೋತ್ಸವ ಆಚರಿಸಿದರು.

ವಿಜಯೋತ್ಸವದಲ್ಲಿ ಶಂಭುಲಿಂಗಪ್ಪ ಆಜೂರ, ಬಸವರಾಜ ರಾಗಿ, ಬಸವರಾಜ್ ಜಕ್ಕಿನಕಟ್ಟಿ, ಈರಣ್ಣ ಚಿಗಳ್ಳಿ, ಶಂಭು ನರ್ತಿ, ವಸಂತ್ ಬಡ್ಡಿ, ಶಂಕರ್ ಗಂಗಣ್ಣವರ್, ಗಂಗಪ್ಪ ಬಂಗಿ, ಬಸಲಿಂಗಪ್ಪ ನರಗುಂದ, ಶ್ರೀಕಾಂತ್ ಪೂಜಾರ್, ಅಶೋಕ್, ಷಣ್ಮುಖಗೌಡ ಪಾಟೀಲ್, ಮಂಜುನಾಥ್ ತಿಮ್ಮಾಪುರ, ಸರ್ತಾಜ್ ಹಾನಗಲ್, ನಿಂಗಪ್ಪ ಹೊಸಪೇಟೆ, ಪರಶುರಾಮ್ ಜಟ್ಟಪ್ಪನವರ್, ಮಾದೇವ್ ಅಗಡಿ, ವಿಜಯ್ ಪಾಟೀಲ್, ಪರಶುರಾಮ ಸೋಮಣ್ಣನವರ್ ಸೇರಿದಂತೆ ಹಲವು ಅಭಿಮಾನಿಗಳು ಭಾಗವಹಿಸಿದ್ದರು.

Edited By : Somashekar
PublicNext

PublicNext

01/08/2026 06:54 pm

Cinque Terre

10.91 K

Cinque Terre

0

ಸಂಬಂಧಿತ ಸುದ್ದಿ