ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆ ಗುರುವಾರ ಪ್ರಾಪರ್ಟಿ ಪರೇಡ್ ನಡೆಸಿತು. ಜನವರಿ 1, 2026ರಿಂದ ಇಲ್ಲಿಯವರೆಗೆ ನಡೆದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಚಿನ್ನ, ಬೆಳ್ಳಿ, ನಗದು, ಮೊಬೈಲ್ ಫೋನ್ ಮತ್ತು ವಾಹನಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಆರೋಪಿತರಿಂದ ವಶಪಡಿಸಿಕೊಳ್ಳಲಾದ 46 ಪ್ರಕರಣಗಳ ಬೆಲೆಬಾಳುವ ವಸ್ತುಗಳನ್ನು ಮಾಲೀಕರಿಗೆ ಹಿಂದಿರುಗಿಸಲಾಯಿತು. ಸುಮಾರು 2 ಕೋಟಿ 30 ಲಕ್ಷ ಮೌಲ್ಯದ ವಸ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಹಾವೇರಿ ಎಸ್‌ಪಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ಪ್ರಾಪರ್ಟಿ ಪರೇಡ್ ನಡೆಸಲಾಯಿತು. 46 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಹಣ, ಬೆಳ್ಳಿ, ಬಂಗಾರ, ಮೊಬೈಲ್ ಫೋನ್, ಕಾರು, ಜೀಪು ಸೇರಿದಂತೆ ಹಲವು ವಾಹನಗಳನ್ನು ಮಾಲೀಕರಿಗೆ ನೀಡಲಾಯಿತು.
PublicNext
30/07/2026 08:46 pm
LOADING...