ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸವಣೂರಿನಲ್ಲಿ ನಕಲಿ ವೈದ್ಯರ ಹಾವಳಿ - ತಂದೆಯ ಪದವಿ ಇಟ್ಟುಕೊಂಡು ಚಿಕಿತ್ಸೆ ನೀಡುತ್ತಿದ್ದ ಮಗ!

ಸವಣೂರು ನಗರದಲ್ಲೆಲ್ಲ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ತಾಲೂಕು ವೈದ್ಯಾಧಿಕಾರಿಗಳು ಕಡಿವಾಣ ಹಾಕುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ತಂದೆಯ ಪದವಿ ಇಟ್ಟುಕೊಂಡು ಮಗ ಚಿಕಿತ್ಸೆ ನೀಡುತ್ತಿರುವ ಘಟನೆ ಸವಣೂರಿನ ಪ್ರಸಿದ್ಧ ಬಾಂಬೆ ಕ್ಲಿನಿಕ್‌ನಲ್ಲಿ ಬೆಳಕಿಗೆ ಬಂದಿದೆ. ಬಿ.ಹೆಚ್.ಎಮ್.ಎಸ್. (BHMS) ಪದವಿ ಪಡೆದಿರುವ ಅಕ್ಬರ್ ಅಲಿ ಸಿದ್ದಿಕಿ ಎಂಬುವರು ಹೋಮಿಯೋಪತಿ ಶಿಕ್ಷಣ ಪಡೆದು ಅಲೋಪತಿ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೇ, ತಮ್ಮ ಹೆಸರಿಗೆ ಕ್ಲಿನಿಕ್ ನೋಂದಣಿ ಮಾಡಿಸಿ, ಯಾವುದೇ ವೈದ್ಯಕೀಯ ಶಿಕ್ಷಣ ಪಡೆಯದ ತಮ್ಮ ಮಗನಿಂದ ರೋಗಿಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದು, ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಈ ಕುರಿತು ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಕಲಾ ಜೆ. ಅವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಹಾಗೂ ಮೌಖಿಕವಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬರಿ "ನೋಟಿಸ್ ನೀಡಲಾಗಿದೆ" ಎಂದು ಹೇಳಿ ಈ ವಿಷಯವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪವನ್ ಕುಮಾರ ಎಸ್. ಎಲ್.

Edited By :
PublicNext

PublicNext

01/08/2026 05:59 pm

Cinque Terre

15.34 K

Cinque Terre

1

ಸಂಬಂಧಿತ ಸುದ್ದಿ