ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ನಾಯಿಗಳನ್ನು ಸಾಯಿಸಿ ವಾಮಾಚಾರ ನಡೆಸಿದ ಕಿಡಿಗೇಡಿಗಳು

ಹಾವೇರಿ: ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಂಟಗಣಿ, ಕಳಸೂರು, ಹತ್ತಿಮತ್ತೂರು ಹಾಗೂ ಕಲ್ಲಕೋಟಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಗಳಲ್ಲಿ ಶ್ವಾನಗಳ ಮೃತದೇಹಗಳು ಪತ್ತೆಯಾಗಿದ್ದು, ಅವುಗಳ ಮೇಲೆ ವಾಮಾಚಾರ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.

ಶ್ವಾನಗಳ ಬಾಯಿಗೆ ದಾರದಿಂದ ಕಟ್ಟಿದ್ದು, ಕೋಳಿಯ ರೆಕ್ಕೆಗಳು ಹಾಗೂ ಕುಂಕುಮ ಹಚ್ಚಿ ವಾಮಾಚಾರ ನಡೆಸಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಒಟ್ಟು ಐದು ಹೆಣ್ಣು ಹಾಗೂ ನಾಲ್ಕು ಗಂಡು ಶ್ವಾನಗಳನ್ನು ಬೇರೆಡೆಯಿಂದ ತೆಗೆದುಕೊಂಡು ಬಂದು ಕೊಂದು, ಈ ರೀತಿ ವಾಮಾಚಾರದ ಕೃತ್ಯ ಎಸಗಲಾಗಿದೆ.

ಜಮೀನುಗಳಿಗೆ ತೆರಳುವ ಮೂರು ಪ್ರಮುಖ ರಸ್ತೆಗಳ ಪಕ್ಕದಲ್ಲೇ ಈ ಘಟನೆ ನಡೆದಿರುವುದರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಜಮೀನುಗಳಿಗೆ ತೆರಳುತ್ತಿದ್ದ ರೈತರು ಮತ್ತು ಸಾರ್ವಜನಿಕರು ಈ ಭೀಕರ ದೃಶ್ಯವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

Edited By : Vinayak Patil
PublicNext

PublicNext

01/08/2026 10:08 pm

Cinque Terre

11.52 K

Cinque Terre

0

ಸಂಬಂಧಿತ ಸುದ್ದಿ