ಹಾವೇರಿ: ಹಾವೇರಿ ತಾಲೂಕಿನ ಕರ್ಜಗಿ ಗ್ರಾಮ ಮತ್ತು ಸುತ್ತಮುತ್ತಲೂ ರೈತರು ಇದೀಗ ಹತಾಶರಾಗಿದ್ದಾರೆ. ಇವರ ಹತಾಶೆಗೆ ಕಾರಣ ಗ್ರಾಮ ಸೇರಿದಂತೆ ಸುತ್ತಮುತ್ತಲ ಜಮೀನುಗಳಲ್ಲಿರುವ ಪಂಪ್ ಸೆಟ್ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಆರೋಪಿಗಳು ಕಳ್ಳತನ ಮಾಡಿದ್ದಾರೆ.
ಕರ್ಜಗಿ ಹೋಬಳಿ ಒಂದರಲ್ಲೇ ಸುಮಾರು 22 ಜನರ ಜಮೀನುಗಳಲ್ಲಿದ್ದ ಪಂಪ್‌ಸೆಟ್ ಮತ್ತು ಕೇಬಲ್ ಕಳ್ಳತನವಾಗಿದೆ. ಸುಮಾರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಪಂಪ್‌ಸೆಟ್ ಮತ್ತು ಕೇಬಲ್ ಕಳ್ಳತನ ಮಾಡಿದರೆ ನಾವು ಹೇಗೆ ಜೀವನ ಮಾಡಬೇಕು ಎನ್ನುತ್ತಿದ್ದಾರೆ ಕರ್ಜಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು.
ರಸ್ತೆಯ ಬದಿ ಇರೋ ಜಮೀನಿನಲ್ಲಿರೋ 22 ಕ್ಕೂ ಅಧಿಕ ರೈತರ ಬೋರ್‌ವೆಲ್ ವಸ್ತುಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ಸುಮಾರು 5 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ.
PublicNext
29/07/2026 10:28 am
LOADING...