ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್ ಟ್ಯಾಕ್ಸಿ ಪ್ರಯಾಣದ ವೇಳೆ ಅಪಘಾತ: ಕೋಮಾ ತಲುಪಿದ 26 ವರ್ಷದ ಟೆಕ್ಕಿ ಅಮರ್ಥ್ಯ

ಬೆಂಗಳೂರು: ಜುಲೈ 13ರ ರಾತ್ರಿ ಸಿಗೇಹಳ್ಳಿಯಿಂದ ಹೂಡಿಗೆ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದ ಅಮರ್ಥ್ಯ, ವೈಟ್‌ಫೀಲ್ಡ್‌ನ ಐಟಿಪಿಎಲ್ ರಸ್ತೆಯ ಫಾರ್ಮುಲಾ ಒನ್ ಜಂಕ್ಷನ್ ಬಳಿ ಭೀಕರ ಅಪಘಾತಕ್ಕೀಡಾಗಿದ್ದಾರೆ. ವೇಗವಾಗಿ ಬಂದ ಕಾರು ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದು, ನಿಲ್ಲಿಸದೆ ಪರಾರಿಯಾಗಿದೆ.

ಈ ಹಿಟ್ ಅಂಡ್ ರನ್ ಘಟನೆಯಲ್ಲಿ ಬೈಕ್ ಸವಾರ ಪ್ರಕಾಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರೆ, ತಲೆಗೆ ತೀವ್ರ ಏಟು ಬಿದ್ದ ಅಮರ್ಥ್ಯ ಕಳೆದ ಮೂರು ವಾರಗಳಿಂದ ಕೋಮಾದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ವೈಟ್‌ಫೀಲ್ಡ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಸದ್ಯ ಅಮರ್ಥ್ಯ ಕುಟುಂಬಸ್ಥರು ಬೈಕ್ ಟ್ಯಾಕ್ಸಿ ಚಾಲಕನ ನಿರ್ಲಕ್ಷ್ಯದ ವಿರುದ್ಧವೂ ಎಕ್ಸ್ (X) ಖಾತೆಯಲ್ಲಿ ಧ್ವನಿ ಎತ್ತಿದ್ದಾರೆ. ಮಗನಿಗೆ ನ್ಯಾಯ ಸಿಗಲಿ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

Edited By :
PublicNext

PublicNext

01/08/2026 05:54 pm

Cinque Terre

6.72 K

Cinque Terre

0

ಸಂಬಂಧಿತ ಸುದ್ದಿ