ಬೆಂಗಳೂರು: ಇಂದಿನಿಂದ ಬೈಕ್ ಟ್ಯಾಕ್ಸಿ ವಿರುದ್ಧ RTO ಮೆಗಾ ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರಿನ 11 ಆರ್‌ಟಿಒ (RTO) ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೈಕ್ ಟ್ಯಾಕ್ಸಿ ವಿರುದ್ಧ ಕರೆದಿದ್ದ ಪ್ರತಿಭಟನೆಯನ್ನು ಸ್ವಾಭಿಮಾನಿ ಚಾಲಕರ ಟ್ರೇಡ್ ಯೂನಿಯನ್ ಸಂಘಟನೆ ರದ್ದುಗೊಳಿಸಿದೆ.
ಬೈಕ್ ಟ್ಯಾಕ್ಸಿ ವಿರುದ್ಧ ಸ್ಪೆಷಲ್ ಆಪರೇಷನ್ ಮಾಡುವ ಬಗ್ಗೆ ಸಾರಿಗೆ ಇಲಾಖೆಯ ಅಪರ ಆಯುಕ್ತರಾದ ಓಂಕಾರೇಶ್ವರಿ ಅವರು ಮಾಹಿತಿ ನೀಡಿದ್ದಾರೆ. ಇಲಾಖೆಯ ಭರವಸೆಯ ಮೇರೆಗೆ ಶಾಂತಿನಗರದಲ್ಲಿ ನಡೆಯಬೇಕಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ RTO ಕಾರ್ಯಾಚರಣೆ ಆರಂಭವಾಗಲಿದೆ.
PublicNext
05/08/2026 01:46 pm
LOADING...