ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷ್ಣಪ್ಪ ಮನೆಗೆ ಕಾಂಗ್ರೆಸ್ ಹೈಕಮಾಂಡ್ : ರಣದೀಪ್ ಸಿಂಗ್ ಸುರ್ಜೇವಾಲ, ಡಿ. ಕೆ. ಶಿವಕುಮಾರ್ ಭೇಟಿ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜಕೀಯ ಕಣದಲ್ಲಿ ಈಗ ಬಿರುಸಿನ ಚಟುವಟಿಕೆಗಳು ರಂಗೇರಿವೆ! ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇರವಾಗಿ ವಿಜಯನಗರ ಕ್ಷೇತ್ರದ ಶಾಸಕರಾದ ಶ್ರೀ ಎಂ. ಕೃಷ್ಣಪ್ಪ ಮನೆ ಬಾಗಿಲಿಗೆ ತೆರಳಿ ಔಪಚಾರಿಕ ಭೇಟಿ ನೀಡಿದ್ದಾರೆ.

​ರಾಜ್ಯ ಸರ್ಕಾರದ ಸಚಿವ ಸಂಪುಟದ ಬಹುನಿರೀಕ್ಷಿತ ಎರಡನೇ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಈ ಗಮನಾರ್ಹ ಭೇಟಿ ನಡೆದಿದೆ. ರಾಜಕೀಯ ಪಂಡಿತರ ಹಾಗೂ ಬೆಂಬಲಿಗರ ಲೆಕ್ಕಾಚಾರದಂತೆ, ಹಿರಿಯ ಶಾಸಕ ಎಂ. ಕೃಷ್ಣಪ್ಪ ಅಥವಾ ಅವರ ಪುತ್ರ, ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ ಅವರ ಹೆಸರು ಈ ಎರಡನೇ ಪಟ್ಟಿಯಲ್ಲಿ ಗ್ಯಾರಂಟಿ ಎಂದೇ ಭಾವಿಸಲಾಗಿತ್ತು. ಆದರೆ, ಬಿಡುಗಡೆಯಾದ ಪಟ್ಟಿಯನ್ನು ನೋಡಿದಾಗ ಇಬ್ಬರ ಹೆಸರುಗಳೂ ಸಂಪೂರ್ಣವಾಗಿ ಮಾಯವಾಗಿದ್ದು ಎಲ್ಲರಿಗೂ ತೀವ್ರ ಅಚ್ಚರಿ ಉಂಟುಮಾಡಿತ್ತು!

​ಈ ಬೆಳವಣಿಗೆಯ ಬೆನ್ನಲ್ಲೇ, ಉನ್ನತ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಡಿ. ಕೆ. ಶಿವಕುಮಾರ್ ಅವರೊಂದಿಗೆ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಸಚಿವ ಬಿ. ಝೆಡ್. ಜಮೀರ್ ಅಹಮದ್ ಖಾನ್, ಶಾಸಕ ಎಚ್. ಸಿ. ಬಾಲಕೃಷ್ಣ ಮತ್ತು ಡಾ. ಕೆ. ರಂಗನಾಥ್ ಹಾಗೂ MLC ವಿನಯ್ ಕಾರ್ತಿಕ್ ಅವರನ್ನೊಳಗೊಂಡ ಪ್ರಮುಖ ನಾಯಕರ ಪಡೆಯೇ ಎಂ. ಕೃಷ್ಣಪ್ಪ ಅವರ ಮನೆಗೆ ಆಗಮಿಸಿದೆ.

ಪ್ರಿಯಾಕೃಷ್ಣ ಹಾಗೂ ಎಂ. ಕೃಷ್ಣಪ್ಪ ಅವರೊಂದಿಗೆ ಮುಖಾಮುಖಿ ಕುಳಿತು ಅತ್ಯಂತ ಆತ್ಮೀಯ ಹಾಗೂ ಪ್ರಮುಖ ಸಮಾಲೋಚನೆ ನಡೆಸಿದ್ದು, ಪ್ರಸ್ತುತ ಬೆಂಗಳೂರು ರಾಜಕೀಯಂಗಳದಲ್ಲಿ ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ!

Edited By : Somashekar
PublicNext

PublicNext

05/08/2026 11:18 pm

Cinque Terre

1.93 K

Cinque Terre

1

ಸಂಬಂಧಿತ ಸುದ್ದಿ