ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಸ್ವತಂತ್ರ ಹಬ್ಬ’: ಮಕ್ಕಳೊಂದಿಗೆ ಬಂದರೆ ವಿಧಾನಸೌಧಕ್ಕೆ ಉಚಿತ ಪ್ರವೇಶ

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಇದೇ ಮೊದಲ ಬಾರಿಗೆ ‘ಸ್ವತಂತ್ರ ಹಬ್ಬ’ ಹೆಸರಿನಲ್ಲಿ ಬೃಹತ್ ಜನೋತ್ಸವ ಆಯೋಜಿಸಲಾಗಿದೆ. ಈ ವಿಶೇಷ ಆಚರಣೆಯಲ್ಲಿ ಶಾಲಾ ಮಕ್ಕಳು, ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ವಿಧಾನಸೌಧ ಹಾಗೂ ಶಾಸನಸಭೆ (Assembly) ವೀಕ್ಷಣೆಗೆ ಸಂಪೂರ್ಣ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮಕ್ಕಳೊಂದಿಗೆ ಬರುವ ಅವರ ಕುಟುಂಬದ ಸದಸ್ಯರಿಗೂ ಉಚಿತ ಪ್ರವೇಶದ ಅವಕಾಶವಿರಲಿದೆ.

​ಆಗಸ್ಟ್ 15ರಂದು ಬೆಳಿಗ್ಗೆ 11 ಗಂಟೆಯ ನಂತರ ಆರಂಭವಾಗುವ ಈ ಉತ್ಸವದಲ್ಲಿ 31 ಜಿಲ್ಲೆಗಳ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ತಬ್ಧಚಿತ್ರಗಳು, ವಿದ್ಯಾರ್ಥಿಗಳ ಪಥಸಂಚಲನ ಹಾಗೂ ಆಕರ್ಷಕ ಪಟಾಕಿ ಪ್ರದರ್ಶನ ನಡೆಯಲಿವೆ. ಸಂಜೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಾಡಿನ ಪ್ರಖ್ಯಾತ ಹಿನ್ನೆಲೆ ಗಾಯಕರಿಂದ ‘ರಸಸಂಜೆ’ ಸಂಗೀತ ಕಾರ್ಯಕ್ರಮ ಜರುಗಲಿದೆ. ಸಾರ್ವಜನಿಕರು ಕುಟುಂಬ ಸಮೇತರಾಗಿ ಉಚಿತವಾಗಿ ಪಾಲ್ಗೊಳ್ಳಲು ಸರ್ಕಾರ ಆಹ್ವಾನಿಸಿದೆ.

Edited By :
PublicNext

PublicNext

05/08/2026 05:18 pm

Cinque Terre

5.61 K

Cinque Terre

1

ಸಂಬಂಧಿತ ಸುದ್ದಿ