ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಪರೀಕ್ಷೆ : ಬಾರಿ ಬಿಗಿ ಭದ್ರತೆ

ಚಾಮರಾಜನಗರ : ಸಿವಿಲ್ ಪೊಲೀಸ್ ಕಾ ನ್ಸ್‌ಟೇಬಲ್ ಹುದ್ದೆಗಳಿಗೆ ಭಾನುವಾರ ಜಿಲ್ಲೆ ಯಲ್ಲಿ ಬಾರಿ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಯಿತು.

ಜಿಲ್ಲೆಯಲ್ಲಿ ಚಾಮರಾಜನಗರದ 12 ಕೇಂದ್ರ,  ಕೊಳ್ಳೇಗಾಲದ 6 ಸೇರಿದಂತೆ ಒಟ್ಟು 18 ಕೇಂದ್ರಗಳಲ್ಲಿ ಸ್ಥಳೀಯ ವೃಂದದ 596 ಹುದ್ದೆಗಳಿಗೆ 5304 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದರು.

ಅಕ್ರಮ ತಡೆಗಟ್ಟುವ ಉದ್ದೇಶದಿಂದ ಪರೀ ಕ್ಷಾ ಕೇಂದ್ರದ ಸುತ್ತಾ ಬಿಗಿ ಭದ್ರತೆ ಒದಗಿಸ ಲಾಗಿತ್ತು. ಜೊತೆಗೆ ಎಲೆಕ್ಟ್ರಾನಿಕ್ ಸಾಧನ, ವಾಚ್, ವಾಟರ್ ಬಾಟೆಲ್ ಕೂಡ ಬ್ಯಾನ್ ಮಾಡಲಾಗಿತ್ತು. ಅಲ್ಲದೆ ಪರೀಕ್ಷೆಗೆ ಹಾಜರಾದವರನ್ನು ಬಾರಿ ತಪಾಸಣೆಗೊಳಪ ಡಿಸಲಾಯಿತು. ಪರೀಕ್ಷೆಗೆ ಹಾಜರಾದವರು ಫುಲ್ ಶರ್ಟ್- ಶೂ ಕೂಡ ಧರಿಸುವಂತಿರಲಿಲ್ಲ, ಮಾಂಗಲ್ಯ ಸರ, ಮೂಗೂತಿ ಬಿಟ್ಟು ಬೇರೆ ಆಭರಣಕ್ಕೂ ಬ್ರೇಕ್ ಹಾಕಲಾಗಿತ್ತು.

Edited By : PublicNext Desk
Kshetra Samachara

Kshetra Samachara

02/08/2026 12:17 pm

Cinque Terre

400

Cinque Terre

0

ಸಂಬಂಧಿತ ಸುದ್ದಿ