ಹೈದರಾಬಾದ್ : ಬಾಡಿಗೆಗೆ ಪಡೆದಿದ್ದ (Rented) ಕಾರನ್ನು ಚಾಲನೆ ಮಾಡುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ವಾಹನದ ಮೇಲಿನ ನಿಯಂತ್ರಣ ತಪ್ಪಿ ಭೀಕರ ಅಪಘಾತ ಎಸಗಿರುವ ಘಟನೆ ಹೈದರಾಬಾದ್‌ನ ಕಾರ್ಮಿಕ ನಗರದಲ್ಲಿ ನಡೆದಿದೆ.
ಹೌದು ಕಾರ್ಮಿಕ ನಗರದ ರಸ್ತೆಯಲ್ಲಿ ಬೆಳಿಗ್ಗೆ ಇಬ್ಬರು ಸಹೋದರರು ದ್ವಿಚಕ್ರ ವಾಹನದಲ್ಲಿ ಚರ್ಚ್‌ಗೆ ಹೊರಟಿದ್ದಾಗ, ಎದುರಿನಿಂದ ಬಂದ ಕಾರು ನಿಯಂತ್ರಣ ತಪ್ಪಿ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಸಹೋದರರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇಷ್ಟಕ್ಕೇ ನಿಲ್ಲದ ಕಾರು, ರಸ್ತೆ ಬದಿಯಲ್ಲಿ ಸಾಲಾಗಿ ನಿಲ್ಲಿಸಲಾಗಿದ್ದ ಏಳು ಮೋಟಾರ್‌ಸೈಕಲ್‌ಗಳ ಮೇಲೆಯೂ ಹರಿದು ಅಪಾರ ಪ್ರಮಾಣದ ಹಾನಿ ಉಂಟುಮಾಡಿದೆ.
ಘಟನೆ ಸಂಬಂಧ ಮಧುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚಾಲನೆ ಮಾಡುತ್ತಿದ್ದ ಅಪ್ರಾಪ್ತನಿಗೆ ಬಾಡಿಗೆ ಕಾರು ಹೇಗೆ ಸಿಕ್ಕಿತು ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
PublicNext
03/08/2026 08:19 am
LOADING...