ಅಮೃತಸರ/ಪಂಜಾಬ್ : ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಹಾಗೂ ಗಡಿ ಉದ್ವಿಗ್ನತೆ ಎಷ್ಟೇ ಇದ್ದರೂ, ಪಂಜಾಬ್‌ನ ಅಠಾರಿ-ವಾಘಾ ಗಡಿಯಲ್ಲಿ ಪ್ರತಿದಿನ ನಡೆಯುವ ಬೀಟಿಂಗ್ ರಿಟ್ರೀಟ್ ಮಿಲಿಟರಿ ಕವಾಯತು ತನ್ನದೇ ಆದ ರೋಮಾಂಚನಕ್ಕೆ ಹೆಸರಾಗಿದೆ. ಉಭಯ ದೇಶಗಳ ಸೈನಿಕರು ತಮ್ಮ ಮಿಲಿಟರಿ ಶಿಸ್ತು ಮತ್ತು ಪರೇಡ್ ಕೌಶಲ್ಯವನ್ನು ಜಗತ್ತಿಗೆ ಪ್ರದರ್ಶಿಸುವ ಈ ಗಡಿಯಲ್ಲಿ, ಇತ್ತೀಚೆಗೆ ನಡೆದ ಅಪರೂಪದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಪಾಕಿಸ್ತಾನದ ಸೈನಿಕನೊಬ್ಬ ಭಾರತೀಯ ಸೇನೆಯ ಅಧಿಕಾರಿಗೆ ಗೌರವಪೂರ್ವಕವಾಗಿ ಸೆಲ್ಯೂಟ್ ಹೊಡೆದಿರುವ ದೃಶ್ಯ ಈ ವಿಡಿಯೋದಲ್ಲಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.
"ಶತ್ರು ದೇಶದ ಸೈನಿಕರು ಇನ್ನೊಂದು ದೇಶದ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡಲು ಮಿಲಿಟರಿ ನಿಯಮಗಳಲ್ಲಿ ಅವಕಾಶವಿದೆಯೇ?" ಎಂದು ನೆಟ್ಟಿಗರು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.
ದಶಕಗಳಿಂದಲೂ ಅಠಾರಿ-ವಾಘಾ ಗಡಿಯಲ್ಲಿ ಈ ಮಿಲಿಟರಿ ಪರೇಡ್ ನಡೆಯುತ್ತಾ ಬಂದಿದೆ. ಈ ಘಟನೆಯ ಕುರಿತು ಮಿಲಿಟರಿ ತಜ್ಞರು ಮತ್ತು ಮಾಜಿ ಸೈನಿಕರು ನೀಡಿರುವ ಸ್ಪಷ್ಟನೆಗಳು ಇಲ್ಲಿವೆ:
ಪಾಕಿಸ್ತಾನದ ಕೆಳಹಂತದ ಸೈನಿಕನೊಬ್ಬ ತಮಗಿಂತ ಹಿರಿಯ ಶ್ರೇಣಿಯ ಭಾರತೀಯ ಸೇನಾಧಿಕಾರಿಗೆ ಮಿಲಿಟರಿ ನಿಯಮಾವಳಿಯಂತೆ ನೀಡಿದ ವೃತ್ತಿಪರ ಗೌರವ ಇದಾಗಿದೆ. ಗಡಿಯಲ್ಲಿ ಇಂತಹ ಘಟನೆಗಳು ಈ ಹಿಂದೆಯೂ ನಡೆದಿದ್ದರೂ, ಆಗ ಸೋಷಿಯಲ್ ಮೀಡಿಯಾ ಇಷ್ಟೊಂದು ಸಕ್ರಿಯವಾಗಿರದ ಕಾರಣ ಜನರ ಗಮನಕ್ಕೆ ಬಂದಿರಲಿಲ್ಲ.
ಈ ಘಟನೆಯನ್ನು ಕೇವಲ ಸೈನಿಕ ಶಿಷ್ಟಾಚಾರದ ಗೌರವವಾಗಿ ನೋಡಬೇಕೇ ಹೊರತು, ಇದರಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಾಂಧವ್ಯದಲ್ಲಿ ಎಲ್ಲವೂ ಸರಿಹೋಗಿದೆ ಎಂಬ ಭ್ರಮೆಗೆ ಬೀಳಬಾರದು ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
PublicNext
04/08/2026 07:46 am
LOADING...