ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರಿಯಮ್ಮ ದೇವಿ ದರ್ಶನ ಪಡೆದ ಭಕ್ತರು

ಹುಬ್ಬಳ್ಳಿ ಕರಿಯಮ್ಮ ದೇವಿ ಜಾತ್ರೆಯಲ್ಲಿ ಬಂಡಾರ್ ಹಬ್ಬ

ಹುಬ್ಬಳ್ಳಿ: ಹುಬ್ಬಳ್ಳಿಯ ಕೆ.ಎಂ.ಸಿ ಹಿಂಭಾಗದಲ್ಲಿರುವ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಇಂದು ಭಂಡಾರ ಜಾತ್ರಾ ಮಹೋತ್ಸವ ಅತ್ಯಂತ ಭಕ್ತಿಭಾವದಿಂದ ವಿಜೃಂಭಣೆಯಿಂದ ಜರುಗಿತು.

ಇಂದು ಬೆಳಗಿನ ಜಾವದಿಂದಲೇ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀ ಕರಿಯಮ್ಮ ದೇವಿಯ ದರ್ಶನ ಪಡೆದರು. ಮಹಿಳೆಯರು, ಯುವಕರು ಹಾಗೂ ಮಕ್ಕಳು ವಿಶೇಷ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು. ಡೊಳ್ಳು-ಕುಣಿತ ಹಾಗೂ ಮೇಳಗಳ ನಿನಾದದೊಂದಿಗೆ ದೇವಿಯ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು.

ಭಕ್ತಿ, ಸಂಪ್ರದಾಯ ಹಾಗೂ ಸೇವೆಯ ಸಂಗಮವಾಗಿ ನಡೆದ ಈ ಭಂಡಾರ ಉತ್ಸವವು ನೆರೆದಿದ್ದ ಅಪಾರ ಭಕ್ತಸಾಗರದಲ್ಲಿ ಧಾರ್ಮಿಕ ಉತ್ಸಾಹ ಮತ್ತು ಸಂತಸವನ್ನು ಇಮ್ಮಡಿಗೊಳಿಸಿತು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/08/2026 07:45 pm

Cinque Terre

15.21 K

Cinque Terre

0