ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಲುವೆಗೆ ನೀರು ಬಿಟ್ಟು ಟೆಂಡರ್ ಕರೆದ ಕೆಬಿಜೆಎನ್‌ಎಲ್ ಅಧಿಕಾರಿಗಳು

ಯಾದಗಿರಿ : ನಾರಾಯಣಪೂರ ಎಡದಂಡೆ ಕಾಲುವೆಗಳಲ್ಲಿ ನೀರು ಹರಿಸುತ್ತಿರುವ ವೇಳೆಯಲ್ಲೇ ದುರಸ್ತಿ ಕಾಮಗಾರಿಗೆ ಟೆಂಡರ್ ಕರೆಯಲಾಗುತ್ತಿದೆ. ಬೇಸಿಗೆಯಲ್ಲಿ ಮಾಡಬೇಕಿದ್ದ ಕಾಮಗಾರಿಯನ್ನು ಈಗ ತರಾತುರಿಯಲ್ಲಿ ನಡೆಸಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಯಾದಗಿರಿ ಜಿಲ್ಲೆಯ ಕೆಂಭಾವಿ ಕೆಬಿಜೆಎನ್‌ಎಲ್ ವಿಭಾಗ-1, ವಿಭಾಗ-2 ಹಾಗೂ ವಿಭಾಗ-21 ವ್ಯಾಪ್ತಿಯ ನಾರಾಯಣಪೂರ ಎಡದಂಡೆ ಕಾಲುವೆಗಳಲ್ಲಿ ದುರಸ್ತಿ ಕಾಮಗಾರಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಕಾಲುವೆಯಲ್ಲಿ ಸಿಲ್ಟ್ ತೆರವು, ಮುಳ್ಳು ಗಿಡಗಳ ಕಟಿಂಗ್ ಹಾಗೂ ಸ್ವಚ್ಛತಾ ಕಾಮಗಾರಿಗಳನ್ನು ಬೇಸಿಗೆಯಲ್ಲೇ ಪೂರ್ಣಗೊಳಿಸಬೇಕಿತ್ತು. ಆದರೆ ಅಧಿಕಾರಿಗಳು ಯಾವುದೇ ಕೆಲಸ ಮಾಡದೆ, ಈಗ ಕಾಲುವೆಗೆ ನೀರು ಹರಿಸಿದ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಲುವೆಗಳಲ್ಲಿ ಮುಳ್ಳು ಗಿಡಗಳು ಮತ್ತು ಪೊದೆಗಳು ಬೆಳೆದು ನೀರಿನ ಹರಿವಿಗೆ ಅಡ್ಡಿಯಾಗಿದ್ದು, ಇದರಿಂದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ.

ಕಾಲುವೆ ಸ್ವಚ್ಛತೆಗೆ ಸರ್ಕಾರ ಸುಮಾರು 2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರೂ, ಕಾಮಗಾರಿ ನಡೆಸದೆ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅನುದಾನ ದುರ್ಬಳಕೆ ಮಾಡಲು ಯತ್ನ ನಡೆಯುತ್ತಿದೆ.

ಈಗಾಗಲೇ ರೈತರು ಸ್ವಂತ ಖರ್ಚಿನಲ್ಲೇ ಕಾಲುವೆಗಳನ್ನು ಸ್ವಚ್ಛಗೊಳಿಸಿಕೊಂಡು ಬೆಳೆಗಳಿಗೆ ನೀರು ಹರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಬೇಸಿಗೆಯಲ್ಲಿಯೇ ಟೆಂಡರ್ ಕರೆದು ದುರಸ್ತಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನೀರು ಹರಿಸುವ ಸಂದರ್ಭದಲ್ಲಿ ಕಾಮಗಾರಿ ಹೆಸರಿನಲ್ಲಿ ಸರ್ಕಾರಿ ಹಣ ಬಳಕೆ ಮಾಡಬಾರದು ಎಂದು ರೈತ ಸಂಘಟನೆ ಹಾಗೂ ಹಸಿರು ಸೇನೆ ಸರ್ಕಾರ ಮತ್ತು ಕೆಬಿಜೆಎನ್‌ಎಲ್ ಅಧಿಕಾರಿಗಳನ್ನು ಒತ್ತಾಯಿಸಿವೆ.

Edited By :
PublicNext

PublicNext

05/08/2026 08:36 am

Cinque Terre

7.27 K

Cinque Terre

0

ಸಂಬಂಧಿತ ಸುದ್ದಿ