ಉಡುಪಿ: ಕರ್ತವ್ಯದಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಕಾನ್‌ಸ್ಟೇಬಲ್ ಅರ್ಜುನ ಶಂಕರ ನೆಲ್ಲೂರ ಅವರ ಅವಲಂಬಿತರಿಗೆ ಎಸ್.ಬಿ.ಐ. ಪೊಲೀಸ್ ಸ್ಯಾಲರಿ ಪ್ಯಾಕೇಜ್ (SBI Police Salary Package) ಯೋಜನೆಯಡಿ ₹1,45,00,000 ಮೊತ್ತದ ವಿಮಾ ಚೆಕ್ ಅನ್ನು ಹಸ್ತಾಂತರಿಸಲಾಯಿತು.
2023-24ನೇ ಸಾಲಿನಲ್ಲಿ ಸಿ.ಎಸ್.ಪಿ. (CSP) ಜಿಲ್ಲಾ ನಿಯಂತ್ರಣ ಕೊಠಡಿ, ಉಡುಪಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರ್ಜುನ ನೆಲ್ಲೂರ, ಹಾವೇರಿಯಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎಸ್‌ಬಿಐನ ಪ್ರಾದೇಶಿಕ ವ್ಯವಹಾರ ಕಚೇರಿಯ ರೀಜನಲ್ ಮ್ಯಾನೇಜರ್ ಬಿ. ಪ್ರಕಾಶ್ ಅಡಿಗ ಅವರು ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ಸಮ್ಮುಖದಲ್ಲಿ ದಿವಂಗತ ಸಿಬ್ಬಂದಿಯವರ ಅವಲಂಬಿತರಿಗೆ ಈ ವೈಯಕ್ತಿಕ ಅಪಘಾತ ವಿಮೆಯ ಚೆಕ್ಕನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಎಸ್‌ಬಿಐನ ಮುಖ್ಯ ವ್ಯವಸ್ಥಾಪಕ ಕೀಳಂಜೆ ಶ್ರೀಕೃಷ್ಣರಾಜ ಭಟ್, ಮಲ್ಪೆ ಶಾಖೆಯ ಮ್ಯಾನೇಜರ್ ರಾಜೇಶ್ ಗಂಗೊಳ್ಳಿ, ಇತರ ಅಧಿಕಾರಿಗಳಾದ ಶ್ರೀನಿವಾಸ್, ಪ್ರಣವ್ ಪೈ, ತನ್ಮಯ್, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮೃತ ಪೇದೆಯವರ ಕುಟುಂಬಸ್ಥರು ಉಪಸ್ಥಿತರಿದ್ದರು.
Kshetra Samachara
05/08/2026 12:27 pm
LOADING...