ಬೆಳಗಾವಿ : ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡು" ಎಂದು ಭಕ್ತನೊಬ್ಬ ಬರೆದ ವಿಚಿತ್ರ ಮನವಿ ಪತ್ರವೊಂದು ಹುಂಡಿಯಲ್ಲಿ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಕಿಗೆ ಬಂದಿದೆ.
ರಾಮದುರ್ಗದ ಪಡೆಕೋಟೆ ಗಲ್ಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಇತ್ತೀಚೆಗೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದಾಗ ಈ ಅಪರೂಪದ ಪತ್ರ ಸಿಕ್ಕಿದೆ.
ಪತ್ರದಲ್ಲೇನಿದೆ?:
ಪತ್ರದಲ್ಲಿ "ಶ್ರೀ ಗಣಪತಿಯೇ ನಮಃ, ಓಂ ಶ್ರೀ ರಾಘವೇಂದ್ರಾಯ ನಮಃ. ರಾಯರೇ ನಮ್ಮನ್ನು ಆ ವಿಷದಿಂದ ಕಾಪಾಡು, ರಾಯರೇ ಆ ಹುಡುಗಿಯಿಂದ ನಮ್ಮನ್ನು ಪಾರುಮಾಡು, ಈ ಕಷ್ಟದಿಂದ ನಮ್ಮನ್ನು ಪಾರುಮಾಡು. ರಾಯರಿದ್ದಾರೆ ನಮ್ಮ ಜೊತೆ, ಹೀಗಾಗಿ ಅವರಲ್ಲಿ ನನ್ನ ಕಷ್ಟವನ್ನು ಹೇಳಿಕೊಳ್ಳುತ್ತಿದ್ದೇನೆ. ಗುರುಗಳೇ, ಆದಿಶಕ್ತಿ ದೇವಿ, ತಂದೆ-ತಾಯಿ ಕಾಪಾಡಿ, ಧನ್ಯವಾದಗಳು" ಎಂದು ಬರೆಯಲಾಗಿದೆ.
ಪತ್ರ ಬರೆದ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಯಾವುದೇ ರೀತಿಯ ಗುರುತು ಪತ್ರದಲ್ಲಿ ಉಲ್ಲೇಖವಾಗಿಲ್ಲ. ಹೀಗಾಗಿ ಈ ಪತ್ರ ಬರೆದವರು ಯಾರು ಎಂಬುದು ತಿಳಿದುಬಂದಿಲ್ಲ. ಆದರೆ, ಹುಂಡಿಯಲ್ಲಿ ಸಿಕ್ಕ ಈ ಭಾವನಾತ್ಮಕ ಹಾಗೂ ವಿಚಿತ್ರ ಮನವಿ ಪತ್ರವು ಮಠದ ಸಿಬ್ಬಂದಿ ಹಾಗೂ ಭಕ್ತರಲ್ಲಿ ಕುತೂಹಲ ಮೂಡಿಸಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.
PublicNext
05/08/2026 01:52 pm
LOADING...