ಮಂಗಳೂರು : ಇತ್ತೀಚೆಗೆ ಕಾಲೇಜುಗಳಲ್ಲಿ ರ‍್ಯಾಗಿಂಗ್ ಪ್ರಕರಣಗಳು ಅಧಿಕವಾಗುತ್ತಿವೆ. ಸೂಕ್ಷ್ಮ ಮನಸ್ಥಿತಿಯ ವಿದ್ಯಾರ್ಥಿಗಳಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರ‍್ಯಾಗಿಂಗ್ ಗೆ ಕಡಿವಾಣ ಹಾಕುವುದು ಪೊಲೀಸರ, ಸರ್ಕಾರದ ಕರ್ತವ್ಯ. ಆದರೆ ರ‍್ಯಾಗಿಂಗ್ ಯನ್ನು ಪೊಲೀಸ್ ಇಲಾಖೆ ಅಸಡ್ಡೆಯಿಂದ ತೆಗೆದುಕೊಂಡಿದೆ ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಆರೋಪಿಸಿದರು.
ವ್ಯಾಸಂಗಕ್ಕೆ ಬಂದ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದು ಸರ್ಕಾರದ ಕೆಲಸ. ಶಿಕ್ಷಣ ಸಂಸ್ಥೆಗಳೂ ಈ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗುತ್ತದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಆ್ಯಂಟಿ ರ‍್ಯಾಗಿಂಗ್ ಕಮಿಟಿ ಇರಲೇಬೇಕೆಂಬ ನಿಯಮವಿದೆ. ಈ ಸಮಿತಿ ಯಾವಾಗ ಆ್ಯಕ್ಟಿವ್ ಆಗಿ ಇರುತ್ತದೆಯೋ ಅಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ. ರ‍್ಯಾಗಿಂಗ್ ಹೆಲ್ಪ್‌ಲೈನ್‌ಗಳು ಕಾರ್ಯಾಚರಿಸುತ್ತಿವೆ. ಆದರೂ ಕೆಲವರು ಹೆದರಿ ಹೆಲ್ಪ್ ಲೈನ್ ಗಳಿಗೆ ಫೋನ್ ಮಾಡುವುದಿಲ್ಲ. ಆದ್ದರಿಂದ ಪೊಲೀಸರು ಪದೇಪದೇ ಬೀಟ್ ಮಾಡುವ ಮೂಲಕ, ಸುಮೊಟೊವಾಗಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ರ‍್ಯಾಗಿಂಗ್ ಆಗಿದೆಯೇ ಎಂದು ಪರಿಶೀಲನೆ ನಡೆಸುವ ಮೂಲಕ ರ‍್ಯಾಗಿಂಗ್ ಅನ್ನು ಹತೋಟಿಗೆ ತರಲು ಸಾಧ್ಯ ಎಂದು ಹೇಳಿದರು.
PublicNext
05/08/2026 05:40 pm
LOADING...