ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ : ಜಂಬಗಾರ್ ಶ್ರೀ ನಾಗಯಕ್ಷಿ ಚೌಡೇಶ್ವರಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ರೂ. ದೇಣಿಗೆ

ಸಾಗರ : ತಾಲೂಕಿನ ಜಂಬಗಾರ್‌ನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ನಾಗಯಕ್ಷಿ ಚೌಡೇಶ್ವರಿ ದೇವಸ್ಥಾನದ ನಿರ್ಮಾಣ ಕಾಮಗಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ₹1 ಲಕ್ಷ ದೇಣಿಗೆ ಹಸ್ತಾಂತರಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ ಈ ದೇಣಿಗೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಸಾಗರ ತಾಲೂಕು ಯೋಜನಾಧಿಕಾರಿ ಶ್ರೀ ದಯಾನಂದ್ ಪೂಜಾರಿ ಅವರು ದೇವಸ್ಥಾನದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ದಯಾನಂದ್ ಪೂಜಾರಿ, ದೇವಸ್ಥಾನ ಸಮಿತಿಯ ಸದಸ್ಯ ಗಿರೀಶ್ ಶ್ರೀಧರನಗರ, ವಲಯ ಮೇಲ್ವಿಚಾರಕ ಕಲ್ಲೇಶ್, ಗಾಂಧಿನಗರ ಸೇವಾ ಪ್ರತಿನಿಧಿ ಶ್ವೇತಾ, ಶ್ರೀ ನಾಗಯಕ್ಷಿ ಚೌಡೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷ ಯೋಗೀಶ್, ಉಪಾಧ್ಯಕ್ಷೆ ನಾಗರತ್ನ, ಕಾರ್ಯದರ್ಶಿ ಮಾಲಾ ರಾಘವೇಂದ್ರ, ಟ್ರಸ್ಟ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By :
PublicNext

PublicNext

05/08/2026 08:39 pm

Cinque Terre

3.38 K

Cinque Terre

0

ಸಂಬಂಧಿತ ಸುದ್ದಿ