ಶಿವಮೊಗ್ಗ : ಶಿವಮೊಗ್ಗದ ಜೀವನಾಡಿಯಾಗಿ, ಮಲೆನಾಡಿನ ಜನಜೀವನಕ್ಕೆ ಆಸರೆಯಾಗಿರುವ ತಾಯಿ ತುಂಗಾ ನದಿಗೆ ಶಾಸಕ ಚನ್ನಬಸಪ್ಪ, ಎಂಎಲ್ ಸಿ ಡಾ.ಧನಂಜಯ ಸರ್ಜಿ ಹಾಗೂ ಶಿವಮೊಗ್ಗ ನಗರ ಬಿಜೆಪಿ ಘಟಕದ ವತಿಯಿಂದ ಮಂಗಳವಾರ ಭಕ್ತಿಭಾವದಿಂದ ಬಾಗಿನ ಅರ್ಪಣೆ ಮಾಡಲಾಯಿತು.
ನಗರದ ಕೋಟೆ ರಸ್ತೆಯ ಐತಿಹಾಸಿಕ ಶ್ರೀ ಕೋರ್ಪಳಯ್ಯನ ಛತ್ರದ ಆವರಣದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ, ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿರುವ ತಾಯಿ ತುಂಗೆಗೆ ಸಂಪ್ರದಾಯಬದ್ಧವಾಗಿ ಇಬ್ಬರು ಶಾಸಕರು ಬಾಗಿನ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ನದಿಯು ಸದಾ ತುಂಬಿ ಹರಿಯಲಿ, ರಾಜ್ಯ ಹಾಗೂ ಜಿಲ್ಲೆಯ ಜನರಿಗೆ ಸಮೃದ್ಧಿ, ಸುಭಿಕ್ಷೆ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.
ಬಾಗಿನ ಸಮರ್ಪಣೆ ವೇಳೆ ನಾಡಿನ ಸರ್ವಾಂಗೀಣ ಅಭಿವೃದ್ಧಿ, ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಶಾಶ್ವತ ಸುಭಿಕ್ಷೆ, ರೈತರ ಬೆಳೆ ಸಮೃದ್ಧಿಯಾಗಿ ಬೆಳೆಯಲಿ, ಅನ್ನದಾತರ ಬದುಕಿನಲ್ಲಿ ಸಂತೋಷ ನೆಲೆಸಲಿ, ಪ್ರತಿಯೊಬ್ಬ ನಾಗರಿಕನಿಗೂ ಆಯುರಾರೋಗ್ಯ ಸುಖ-ಶಾಂತಿ ಮತ್ತು ನೆಮ್ಮದಿ ದೊರೆಯಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
PublicNext
04/08/2026 04:20 pm
LOADING...