ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲೆನಾಡಿನಲ್ಲಿ ಜೋರಾದ ವರುಣನ ಅಬ್ಬರ – ಮೈದುಂಬಿ ಹರಿಯುತ್ತಿದೆ ಬಾಳೆಬರೆ ಫಾಲ್ಸ್

ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಜೋರಾಗಿದ್ದು, ಹೊಸನಗರ ತಾಲೂಕಿನ ಹುಲಿಕಲ್ ಘಾಟಿ ಮಾರ್ಗದಲ್ಲಿರುವ ಪ್ರಸಿದ್ಧ 'ಬಾಳೆಬರೆ ಫಾಲ್ಸ್' ಮೈದುಂಬಿ ಹರಿಯುತ್ತಿದೆ. ಸುಮಾರು 100 ಅಡಿ ಎತ್ತರದಿಂದ ಹಾಲ್ನೊರೆಯಂತೆ ದುಮ್ಮಿಕ್ಕುತ್ತಿರುವ ಜಲಪಾತದ ದೃಶ್ಯ ಪ್ರವಾಸಿಗರ ಮನಸೆಳೆಯುತ್ತಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಹುಲಿಕಲ್ ಪ್ರದೇಶದಲ್ಲಿ ಪ್ರಕೃತಿ ಸೌಂದರ್ಯ ಅನಾವರಣಗೊಂಡಿದೆ. ಭೋರ್ಗರೆಯುತ್ತಿರುವ ಈ ನೈಸರ್ಗಿಕ ಜಲಪಾತವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಹಾಗೂ ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ.

ಮಳೆಯಿಂದಾಗಿ ಮಲೆನಾಡಿನ ಹಲವು ನೈಸರ್ಗಿಕ ಜಲಪಾತಗಳು ಜೀವಕಳೆ ಪಡೆದುಕೊಂಡಿದ್ದು, ಹುಲಿಕಲ್ ಘಾಟಿಯಲ್ಲಿ ಸಂಚರಿಸುವ ಪ್ರವಾಸಿಗರಿಗೆ ಬಾಳೆಬರೆ ಫಾಲ್ಸ್ ಕಣ್ಣಿಗೆ ಹಬ್ಬದಂತೆ ಕಂಗೊಳಿಸುತ್ತಾ ಕೈಬೀಸಿ ಕರೆಯುತ್ತಿದೆ.

Edited By :
PublicNext

PublicNext

05/08/2026 11:17 am

Cinque Terre

5.39 K

Cinque Terre

0

ಸಂಬಂಧಿತ ಸುದ್ದಿ