ಶಿವಮೊಗ್ಗ: ಮಲೆನಾಡಿನಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಶಿವಮೊಗ್ಗ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ತುಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತುಂಗಾ ಜಲಾಶಯಕ್ಕೆ ಬರೋಬ್ಬರಿ 59,607 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, 50,753 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ.
ಇದರಿಂದಾಗಿ ಶಿವಮೊಗ್ಗ ತಾಲೂಕಿನ ಮತ್ತೂರು ಮತ್ತು ಕುಸ್ಕೂರು ಗ್ರಾಮಗಳಲ್ಲಿ ನದಿಯ ನೀರು ಅಡಿಕೆ ತೋಟಗಳಿಗೆ ನುಗ್ಗಿದ್ದು, ಎರಡು ದಿನ ಕಳೆದರೂ ಇಳಿದಿಲ್ಲ. ಸಾಲಸೋಲ ಮಾಡಿ ಬೆಳೆದ ಪೈರು ಕಣ್ಣೆದುರೇ ಜಲಾವೃತವಾಗಿರುವುದನ್ನು ಕಂಡು ನದಿ ಪಾತ್ರದ ರೈತರು ತೀವ್ರ ಆತಂಕಕ್ಕೀಡಾಗಿದ್ದಾರೆ.
ಈ ಕುರಿತು ಕಂಗಾಲಾಗಿರುವ ಸ್ಥಳೀಯ ರೈತ ಕುಮಾರ್ ಮಾತನಾಡಿ, "ನಮ್ಮ ಅಡಿಕೆ ತೋಟ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ವರ್ಷಪೂರ್ತಿ ಪಟ್ಟ ಶ್ರಮವೆಲ್ಲ ನೀರಿನಲ್ಲಿ ಹೋಯಿತು. ಸರ್ಕಾರ ಹಾಗೂ ತಾಲೂಕು ಆಡಳಿತ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ನಮಗೆ ಸೂಕ್ತ ಪರಿಹಾರ ನೀಡಬೇಕು," ಎಂದು ಆಗ್ರಹಿಸಿದ್ದಾರೆ.
PublicNext
04/08/2026 12:22 pm
LOADING...