ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಮಳೆ ಸ್ವಲ್ಪ ತಗ್ಗಿದ್ದು ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಪ್ರಮಾಣ ಕಡಿಮೆಯಾಗಿದೆ. ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು ಕೊಂಚ ಕಡಿಮೆಯಾಗಿದೆ. ಬಿಟ್ಟು ಬಿಡದೇ ಸುರಿದ ಮಳೆಯಿಂದ ಕಂಗಲಾಗಿದ್ದ ಮಲೆನಾಡಿಗರು ಕೊಂಚ ನಿರಾಳರಾಗಿದ್ದಾರೆ. ಗರಿಷ್ಠ ಮಟ್ಟ 1819.00 ಅಡಿ ಇರುವ ಲಿಂಗನಮಕ್ಕಿ ಜಲಾಶಯ ಇಂದು 1787.20 ಅಡಿ ತಲುಪಿದೆ. 151.64 ಟಿಎಂಸಿ ಇರುವ ಜಲಾಶಯ ಇಂದು 67.68 ಟಿಎಂಸಿ ನೀರು ಸಂಗ್ರಹವಾಗಿದೆ. 31,848 ಕ್ಯೂಸೆಕ್ ಒಳಹರಿವಿದೆ, 2,078 ಕ್ಯೂಸೆಕ್ ನೀರು ಹೊರಬಿಡಲಾಗ್ತಿದೆ. ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು 37,412 ಕ್ಯೂಸೆಕ್ ಒಳಹರಿವು ಇದೆ.
37,273 ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗ್ತಿದೆ. ಇನ್ನು ಭದ್ರಾ ಜಲಾಶಯ ಗರಿಷ್ಠ 186 ಅಡಿ ಇದ್ದು ಇಂದು 165 ಅಡಿ 9 ತಲುಪಿದೆ. 71.535 ಟಿಎಂಸಿ ಯಲ್ಲಿ ಸದ್ಯ 48.484 ಟಿಎಂಸಿ ನೀರು ಸಂಗ್ರಹವಾಗಿದೆ. 11,790 ಕ್ಯೂಸೆಕ್ ಒಳಹರಿವಿದ್ದು 193 ಕ್ಯೂಸೆಕ್ ನೀರನ್ನ ಹೊರಬಿಡಲಾಗ್ತಿದೆ.
PublicNext
05/08/2026 03:18 pm
LOADING...