ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಮಸ್ಥರಲ್ಲಿ ನಡುಕ ಹುಟ್ಟಿಸಿದ್ದ ಮುಷ್ಯ ಕೊನೆಗೂ ಸೆರೆ

ಶಿವಮೊಗ್ಗ: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಅರಹತೋಳು (ಅರಹತೊಳಲು) ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಮುಷ್ಯ (ಕೋತಿ/ಕಪಿ) ಬನವಾಸಿಯಿಂದ ಬಂದ ವಿಶೇಷ ತಂಡವು ಸೆರೆಹಿಡಿದಿದೆ.

ಕಳೆದ ಭಾನುವಾರ ಈ ಮುಸಿಯ ಗ್ರಾಮದ ಬಾಲಕನೊಬ್ಬನ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಒಂಟಿಯಾಗಿ ಯಾರೇ ಕಂಡರೂ ದಾಳಿಗೆ ಮುಂದಾಗುತ್ತಿದ್ದರಿಂದ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಪಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಬನವಾಸಿಯ ವೀರಯ್ಯ ಸಗಣಚಾರಿ ನೇತೃತ್ವದ ತಂಡವನ್ನು ಕರೆಯಿಸಲಾಯಿತು.

ಮುಸಿಯವನ್ನು ಸೆರೆಹಿಡಿಯಲಾಗಿದ್ದು, ಅದನ್ನು ದಟ್ಟ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮನೋಹರ್, ಕೆ. ಹನುಮಂತಪ್ಪ ಹಾಗೂ ಪಿಡಿಒ ಎನ್. ದೊರೆ ಪಾಲ್ಗೊಂಡಿದ್ದರು.

Edited By : Somashekar
PublicNext

PublicNext

05/08/2026 01:34 pm

Cinque Terre

4.52 K

Cinque Terre

0

ಸಂಬಂಧಿತ ಸುದ್ದಿ