ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಮೈದುಂಬಿದ ತುಂಗೆಗೆ ಬಾಗಿನ ಅರ್ಪಿಸಿದ ಶಾಸಕ ಆರಗ ಜ್ಞಾನೇಂದ್ರ

ಶಿವಮೊಗ್ಗ: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ತೀರ್ಥಹಳ್ಳಿಯ ಪ್ರಸಿದ್ಧ ರಾಮಮಂಟಪದ ಬಳಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ತಾಲೂಕು ಆಡಳಿತದ ವತಿಯಿಂದ ತುಂಗೆಗೆ ಬಾಗಿನ ಅರ್ಪಿಸಲಾಯಿತು.

ತುಂಗಾ ನದಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಶ್ರದ್ಧಾಭಕ್ತಿಯಿಂದ ಬಾಗಿನ ಅರ್ಪಿಸಲಾಯಿತು. ಇದೇ ವೇಳೆ ಜನಪ್ರತಿನಿಧಿಗಳು, ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಲಾಯಿತು.

ಇದೇ ವೇಳೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, "ಡ್ಯಾಮ್‌ಗಳು ತುಂಬಿ ಉಕ್ಕಿ ಕೆಳಭಾಗಕ್ಕೆ ನೀರು ಹರಿಯುತ್ತಿದ್ದು, ನಾಡಿನಲ್ಲಿ ಸಮೃದ್ಧಿಯ ವಾತಾವರಣ ನಿರ್ಮಾಣವಾಗಿದೆ. ನಾಡಿನಲ್ಲಿ ಬರಗಾಲ ಬಾರದಿರಲಿ, ನದಿ ನೀರಿನಿಂದ ಯಾವುದೇ ಅನಾಹುತ ಆಗದಿರಲಿ ಎಂದು ತುಂಗಾ ಮಾತೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಉತ್ತಮ ಮಳೆ-ಬೆಳೆಯಾಗಿ ರಾಜ್ಯ ಮತ್ತು ದೇಶ ಸಮೃದ್ಧಗೊಳ್ಳಲಿ ಎಂದು ಪ್ರಾರ್ಥಿಸಿದ್ದೇವೆ" ಎಂದರು.

Edited By :
PublicNext

PublicNext

04/08/2026 01:48 pm

Cinque Terre

6.2 K

Cinque Terre

1

ಸಂಬಂಧಿತ ಸುದ್ದಿ