ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ : ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ SIR ಕುರಿತು ಮುಖಂಡರ ಸಭೆ

ಸಾಗರ : ಸಾಗರ ಉಪ ವಿಭಾಗಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಉಪ ವಿಭಾಗಾಧಿಕಾರಿ ವೀರೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR) ಕುರಿತು ಪ್ರಮುಖ ರಾಷ್ಟ್ರೀಯ ರಾಜಕೀಯ ಪಕ್ಷಗಳ BLA-1 (ಬೂತ್ ಮಟ್ಟದ ಏಜೆಂಟ್-1) ಹಾಗೂ ರಾಜಕೀಯ ಮುಖಂಡರ ಸಭೆಯನ್ನು ಆಯೋಜಿಸಲಾಗಿತ್ತು. ಮತದಾರರ ಪಟ್ಟಿಯ ನಿಖರತೆ ಹಾಗೂ ಮುಂಬರುವ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ವೀರೇಶ್ ಕುಮಾರ್ ಅವರು, "ಯಾವುದೇ ಸೂಕ್ತ ದಾಖಲೆಗಳಿಲ್ಲದ ಮತದಾರರಿಗೆ ಪಿಆರ್‌ಸಿ (PRC) ವಿತರಿಸುವ ಹಿನ್ನೆಲೆಯಲ್ಲಿ ನೈಜ ಭಾರತೀಯ ಪ್ರಜೆಯಾಗಿರುವ ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಭಾರತದ ನೈಜ ಪ್ರಜೆಗಳಿಗೆ ಅಗತ್ಯ ನಿಯಮಗಳ ಪ್ರಕಾರ ತಹಶೀಲ್ದಾರ್ ಹಂತದಲ್ಲಿ ಪರಿಶೀಲಿಸಿ ಪ್ರಮಾಣಪತ್ರ ನೀಡಲು ಅವಕಾಶವಿದೆ. ಬಿಎಲ್‌ಒಗಳು ನಿಗದಿಪಡಿಸಿದ ಎಸ್‌ಒಪಿ (SOP) ಪ್ರಕಾರ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ನಿಯಮಾವಳಿಗಳಂತೆ ಮೌಖಿಕ ಸಾಕ್ಷ್ಯಗಳನ್ನು ಸಹ ಪರಿಗಣಿಸಲು ಅವಕಾಶವಿದ್ದು, ಸಕ್ಷಮ ಪ್ರಾಧಿಕಾರವು ಇವುಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ" ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಮತದಾರರ ಪಟ್ಟಿಯ ಡಿಜಿಟಲೀಕರಣ ಪ್ರಗತಿಯ ಕುರಿತು ಮಾಹಿತಿ ನೀಡಿದ ಅವರು, "ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇಕಡಾ 90.84 ರಷ್ಟು ಡಿಜಿಟಲೀಕರಣ ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಪ್ರತಿಯೊಬ್ಬ ಬಿಎಲ್‌ಒ ವ್ಯಾಪ್ತಿಯಲ್ಲಿರುವ 100 ಮತದಾರರ ಪೈಕಿ 100 ಜನರನ್ನು ಸಂಪೂರ್ಣವಾಗಿ ಮ್ಯಾಪಿಂಗ್ ಮಾಡಲಾಗಿದ್ದು, ಡಿಜಿಟಲೀಕರಣ ಅಥವಾ ಎಎಸ್‌ಡಿ (ASD) ಮಾರ್ಕಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರಸ್ತುತ ಬಿಎಲ್‌ಒಗಳ ಹಂತದಲ್ಲಿ ಯಾವುದೇ ಅರ್ಜಿಗಳು ಬಾಕಿ ಉಳಿದಿಲ್ಲ" ಎಂದು ಆತ್ಮವಿಶ್ವಾಸದಿಂದ ತಿಳಿಸಿದರು.

ಈ ಸಭೆಯಲ್ಲಿ ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ಆರ್., ಹೊಸನಗರ ತಾಲೂಕು ತಹಶೀಲ್ದಾರ್ ಹಾಗೂ ತಾಲೂಕು ಕಚೇರಿಯ ಶಿರಸ್ತೇದಾರ್ ಫರ್ನಾಂಡಿಸ್ ಸೇರಿದಂತೆ ವಿವಿಧ ರಾಷ್ಟ್ರೀಯ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರು ಹಾಗೂ BLA-1 ಪ್ರತಿನಿಧಿಗಳು ಉಪಸ್ಥಿತರಿದ್ದು, ಸಭೆಯ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ವರದಿ : ಜಮೀಲ್ ಸಾಗರ್, ಪಬ್ಲಿಕ್ ನೆಕ್ಸ್ಟ್, ಸಾಗರ.

Edited By : PublicNext Desk
PublicNext

PublicNext

05/08/2026 07:27 pm

Cinque Terre

3.27 K

Cinque Terre

0

ಸಂಬಂಧಿತ ಸುದ್ದಿ