ಶಿವಮೊಗ್ಗ : ರಾಜ್ಯದ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಂಪೂರ್ಣವಾಗಿ ಕಾಲಹರಣವಾಗುತ್ತಿದ್ದು, ಅಭಿವೃದ್ಧಿ ಕೆಲಸಗಳು ಶೂನ್ಯವಾಗಿವೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಸಚಿವರ ಕಾರ್ಯವೈಖರಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಸಚಿವರಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ. ಸರ್ಕಾರಕ್ಕೆ ಕೇವಲ ಸಂಪನ್ಮೂಲ ಭರಿತ ಮತ್ತು ಜಾಸ್ತಿ ಆದಾಯ ತಂದುಕೊಡುವ ಖಾತೆಗಳ ಮೇಲಷ್ಟೇ ಕಣ್ಣಿದೆ ಹೊರತು, ರೈತರ ಮತ್ತು ಜನರ ಹಿತಾಸಕ್ತಿಯ ಮೇಲಲ್ಲ.
ಪ್ರಮುಖವಾಗಿ ನೀರಾವರಿ ಖಾತೆ ವಹಿಸಿಕೊಂಡಿರುವ ಸಚಿವರಿಗೆ ವಿಷಯದ ಗಂಧಗಾಳಿಯೇ ಗೊತ್ತಿಲ್ಲ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದರು.
ಸರ್ಕಾರದ ಬಳಿ ಹಣಕಾಸಿನ ತೀವ್ರ ಅಭಾವವಿದೆ. ರೈತರು, ಅಂಗವಿಕಲರು, 'ಸಂಧ್ಯಾ ಸುರಕ್ಷಾ' ಯೋಜನೆ ಹಾಗೂ 'ಗೃಹಲಕ್ಷ್ಮಿ' ಯೋಜನೆಯ ಹಣ ನೀಡಲು ಸರ್ಕಾರದ ಬಳಿ ದುಡ್ಡಿಲ್ಲ. ಯೋಜನೆಗಳಿಗೆ ಹಣ ಹೊಂದಿಸಲು ಬಡವರ ಹೊಟ್ಟೆಯ ಮೇಲೆ ಹೊಡೆಯಲಾಗುತ್ತಿದೆ. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಅದನ್ನು ವೀಕ್ಷಣೆ ಮಾಡಲು ಸರ್ಕಾರಕ್ಕೆ ಸಮಯವೇ ಇಲ್ಲದಂತಾಗಿದೆ ಎಂದರು.
PublicNext
05/08/2026 10:59 pm
LOADING...