ಮಂಗಳೂರು : ನಗರದ ವಾಮಂಜೂರು ಸಮೀಪದ ಕೆತ್ತಿಕಲ್‌ನಲ್ಲಿ ಮತ್ತೆ ಗುಡ್ಡ ಕುಸಿತವಾಗಿದ್ದು, ಮಣ್ಣು ಹಾಗೂ ಬಂಡೆ ಕಲ್ಲುಗಳು ಕುಸಿದು ರಸ್ತೆಗೆ ಉರುಳುತ್ತಿರುವ ಭಯಾನಕ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ಕೆಲ ದಿನಗಳ ಹಿಂದೆ ಅದೇ ಸ್ಥಳದಲ್ಲಿ ಗುಡ್ಡ ಕುಸಿತಗೊಂಡು ಲೋಡುಗಟ್ಟಲೆ ಮಣ್ಣು ಹೆದ್ದಾರಿಗೆ ಬಿದ್ದಿತ್ತು. ಬಳಿಕ ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿತ್ತು. ಕಳೆದೆರಡು ದಿನಗಳಿಂದ ಮಳೆ ಮತ್ತೆ ಚುರುಕಾಗಿದ್ದು, ಭಾರೀ ಪ್ರಮಾಣದಲ್ಲಿ ಮಣ್ಣು ಸಹಿತ ಬಂಡೆ ಕುಸಿದು ಮತ್ತೆ ಹೆದ್ದಾರಿಗೆ ಬಿದ್ದಿದೆ. ಗುಡ್ಡದ ಮೇಲೆ ಮಣ್ಣು ಹಾಗೂ ಬಂಡೆ ಬಿರುಕು ಬಿಟ್ಟು ನಿಂತಿದ್ದು ಮತ್ತಷ್ಟು ಕುಸಿತದ ಆತಂಕವಿದೆ.
ಹೆದ್ದಾರಿ ಕಾಮಗಾರಿಗೆ ಅಸಮರ್ಪಕವಾಗಿ ಗುಡ್ಡವನ್ನು ಅಗೆದಿರುವುದೇ ಈ ಅವಾಂತರಕ್ಕೆ ಕಾರಣ. ಇನ್ನು ಮುಂದಾದರೂ ವೈಜ್ಞಾನಿಕವಾಗಿ ಪರಿಹಾರೋಪಾಯ ಕೈಗೊಳ್ಳದಿದ್ದಲ್ಲಿ ಮತ್ತೊಂದು ಶೀರೂರು, ವಯನಾಡ್ ದುರಂತವನ್ನು ಎದುರು ನೋಡುವಂತಾದೀತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
PublicNext
06/08/2026 12:20 am
LOADING...