ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವತಿಯಿಂದ ಮನೆ ಮನೆ ಕಸ ಸಂಗ್ರಹಣೆ ಮಾಡಿ ವಿಲೇವಾರಿ ಮಾಡುತ್ತಿರುವಾಗ ಮುಲ್ಕಿ ನಗರ ಪಂಚಾಯಿತಿಯ ಕಸ ಸಂಗ್ರಹಣೆ ಮಾಡುವ ವಾಹನ ಚಾಲಕ ಗೋಪಾಲ ಎಂಬವರಿಗೆ ಸುಮಾರು 2.5 ಪವನ್ ಚಿನ್ನಾಭರಣ ದೊರೆತಿದ್ದು, ಕೂಡಲೇ ಅವರು ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್ ಕಾರ್ಯಪ್ರವೃತ್ತರಾಗಿ ಚಿನ್ನಾಭರಣ ಕಳೆದು ಹೋದ ವಾರೀಸುದಾರರ ಬಗ್ಗೆ ಮಾಹಿತಿ ಪಡೆದು ಬಪ್ಪನಾಡು ಬಡಗುಹಿತ್ಲು ನಿವಾಸಿ ನಾಗೇಶ್ ಎಂಬವರನ್ನು ನಗರ ಪಂಚಾಯಿತಿ ಕಚೇರಿಗೆ ಕರೆಸಿ ಪೌರಕಾರ್ಮಿಕರ ಸಮಕ್ಷಮದಲ್ಲಿ ಸುಮಾರು 3 ಲಕ್ಷ ಮೌಲ್ಯದ 2.5 ಪವನ್ ಚಿನ್ನಾಭರಣವನ್ನು ನಾಗೇಶ್ ರವರಿಗೆ ಹಸ್ತಾಂತರ ಮಾಡಲಾಯಿತು.
ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್ ಮಾತನಾಡಿ, ಪ್ರಾಮಾಣಿಕತೆ ಮೆರೆದ ಮುಲ್ಕಿ ನಗರ ಪಂಚಾಯತ್ ಪೌರಕಾರ್ಮಿಕರ ನಡೆಯpunith ಶ್ಲಾಘಿಸಿದ್ದಾರೆ. ಹಾಗೂ ಕಸ ತ್ಯಾಜ್ಯ ವಿಲೇವಾರಿ ಮಾಡುವಾಗ ಪ್ರತೀ ಮನೆಯವರು ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗರೂಕತೆ ಹಾಗೂ ಎಚ್ಚರಿಕೆ ವಹಿಸಬೇಕು ಎಂದರು.
ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ಮಾಜಿ ಸದಸ್ಯರಾದ ಪುತ್ತು ಬಾವ, ಬಾಲಚಂದ್ರ ಕಾಮತ್, ನಗರ ಪಂಚಾಯತಿ ಸಿಬ್ಬಂದಿ ನವೀನ್ ಚಂದ್ರ, ಕಿಶೋರ್, ಅಜಯ್ ಮತ್ತಿತರರು ಉಪಸ್ಥಿತರಿದ್ದರು.
PublicNext
06/08/2026 09:20 pm
LOADING...