ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿರಾಜಪೇಟೆ ತಾಲ್ಲೂಕು ಕಚೇರಿ ಬಳಿ ವಾಮಾಚಾರ?

ವಿರಾಜಪೇಟೆ : ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕು ಕಚೇರಿ, ಮಹಿಳಾ ಸಮಾಜ ಹಾಗೂ ಗಾಂಧಿನಗರದ ಮೂರು ರಸ್ತೆಗಳು ಸೇರುವ ಸ್ಥಳದಲ್ಲಿ ಮುಖ್ಯ ರಸ್ತೆಯಲ್ಲೇ ಈ ರೀತಿಯ ಪೂಜೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಕ್ಯಾಂಟೀನ್ ಮಾಲೀಕರಾದ ಸುಮತಿ ಹಾಗೂ ಆರ್ಮಿ ಕ್ಯಾಂಟೀನ್ ಸಿಬ್ಬಂದಿ ಕಿರಣ್ ಅವರು ಮಾಹಿತಿ ನೀಡಿದರು. ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನಗಳಲ್ಲಿ ಸುಮಾರು ಎರಡು ವರ್ಷಗಳಿಂದ ಈ ರೀತಿಯ ಘಟನೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಅಲ್ಲದೆ, ಈ ಭಾಗದಲ್ಲಿ ಕೆಲವರು ತಮ್ಮ ಮನೆಗಳ ಸಾಕುಪ್ರಾಣಿಗಳಾದ ಬೆಕ್ಕು, ನಾಯಿಮರಿಗಳನ್ನು ತಂದು ಬಿಟ್ಟು ಹೋಗುತ್ತಾರೆ. ಇದರಿಂದಾಗಿ ಈ ಭಾಗಕ್ಕೆ ಬರಲು ಸಾರ್ವಜನಿಕರು ಭಯಭೀತರಾಗಿದ್ದಾರೆ. ಈ ರಸ್ತೆಯ ಮೂಲಕ ಪ್ರತಿದಿನ ಶಾಲೆಗೆ ಹೋಗುವ ಮಕ್ಕಳು ಹಾಗೂ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಆತಂಕದಿಂದ ಸಂಚರಿಸುತ್ತಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ತಕ್ಷಣ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಅಲ್ಲದೆ, ಪಕ್ಕದ ಜಾಗದ ಮಾಲೀಕರು ಈ ಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಈ ರೀತಿಯ ಪೂಜೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಿರಣ್ ಅವರು ತಿಳಿಸಿದರು.

ರಸ್ತೆ ಪಕ್ಕದ ಮಾಲೀಕರಾದ ದೊಡ್ಡ ವೀರಕ್ರ ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳಿಗೆ ಮಾಹಿತಿ ನೀಡಿದಾಗ, ತಕ್ಷಣ ಸಿಸಿ ಕ್ಯಾಮೆರಾ ಅಳವಡಿಸುತ್ತೇನೆ. ಅಲ್ಲದೆ, ರಸ್ತೆಯ ಎರಡು ಬದಿಗಳಲ್ಲಿ ಕಸವನ್ನು ತಂದು ಹಾಕುತ್ತಾರೆ. ಬೀದಿ ನಾಯಿಗಳು ಅದನ್ನು ಎಳೆದು ರಸ್ತೆಗೆ ಹಾಕುತ್ತವೆ. ಮದ್ಯದ ಬಾಟಲಿಗಳನ್ನು ರಸ್ತೆಯ ಬದಿಯ ಚರಂಡಿಯಲ್ಲಿ ಹಾಕುವುದರಿಂದ ಚರಂಡಿಗಳು ಬಾಟಲಿಗಳಿಂದ ತುಂಬಿ ಹೋಗಿವೆ ಎಂದು ಸ್ವಾಮೀಜಿಗಳು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

02/09/2026 07:00 am

Cinque Terre

260

Cinque Terre

0

ಸಂಬಂಧಿತ ಸುದ್ದಿ