ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೇರದಾಳದಲ್ಲಿ ಶ್ರೀ ಅಲ್ಲಮಪ್ರಭುದೇವರ ಜಾತ್ರೋತ್ಸವ ಸಡಗರ: ಸಕಲ ವಾದ್ಯಮೇಳಗಳೊಂದಿಗೆ ವಿಜೃಂಭಿಸಿದ ಪಲ್ಲಕ್ಕಿ ಉತ್ಸವ!

ಬಾಗಲಕೋಟೆ (ರಬಕವಿ-ಬನಹಟ್ಟಿ) : ತೇರದಾಳ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ಜಾತ್ರಾಮಹೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವವು ಸಕಲ ವಾದ್ಯಮೇಳಗಳೊಂದಿಗೆ ಸಡಗರ ಸಂಬ್ರಮದಿಂದ ಜರುಗಿತು. ಪಲ್ಲಕ್ಕಿ ಹಾಗೂ ನಂದಿಕೋಲು ಉತ್ಸವ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಾಜ್ಯ ಸೇರಿ ಹೊರರಾಜ್ಯಗಳಿಂದಲೂ ಹರಿದುಬಂದಿತು. ಭಕ್ತರು ಬೆಂಡು ಬೆತ್ತೊಸು ಹಾರಿಸಿ ಭಕ್ತಿಯ ದರ್ಶನ ಪಡೆದುಕೊಂಡರು.

ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ಶ್ರೀ ಅಲ್ಲಮಪ್ರಭುದೇವರಿಗೆ ವಿಶೇಷ ಪೂಜೆ, ಆರುತಿ, ನಗಾರಿ ಸೇವೆ ಹಾಗೂ ದೂಪದ ಸೇವೆಗಳು ಅರ್ಚಕರಿಂದ ನೆರವೇರಿದವು. ಭಕ್ತರು ಬೆಳಿಗ್ಗೆಯಿಂದಲೇ ದೀರ್ಘದಂಡ ನಮಸ್ಕಾರದ ಮೂಲಕ ಹರಕೆ ತಿರಿಸಿದರು. ಸಾವಿರಾರು ಭಕ್ತರಿಗೆ ಪ್ರಸಾದ ಸಮಿತಿಯಿಂದ ಪ್ರಸಾದ ಸೇವೆ ನಿರಂತರವಾಗಿ ನಡೆಯಿತು.

ದೇವಸ್ಥಾನಕ್ಕೆ ಪುಷ್ಪಲಂಕಾರ, ವಿಶೇಷ ಪೂಜಾದಿಗಳು, ಸಾಂಪ್ರದಾಯಿಕ ರಾಜಪೋಷಾಕು ಧರಿಸಿದ ಸೇವಕರು ಹಾಗೂ ಗಾಂಧಿಧರಿಸುವ ಬಿಳಿಟೊಪ್ಪಿಗೆ ಧರಿಸುವ ಪೋಷಾಕುಗಳು ಐತಿಹಾಸಿಕ ಉತ್ಸವದ ನೆನಪನ್ನು ಕಟ್ಟಿಕೊಟ್ಟವು. ನಾಳೆ ಮಂಗಳವಾರ ಮದ್ಯಾಹ್ನ 3ಗಂಟೆಗೆ ಇರಾನ್-ರಷ್ಯಾ ಸೇರಿ ಹಲವು ಕುಸ್ತಿ ಪಟುಗಳಿಂದ ಅಂತರರಾಷ್ಟ್ರೀಯ ಜಂಗಿ ನಿಕಾಲಿ ಕುಸ್ತಿಗಳು ನಡೆಯಲಿವೆ.

Edited By : PublicNext Desk
Kshetra Samachara

Kshetra Samachara

07/09/2026 05:14 pm

Cinque Terre

1.02 K

Cinque Terre

0

ಸಂಬಂಧಿತ ಸುದ್ದಿ