ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪವಾಸ ಸತ್ಯಾಗ್ರಹಿಗಳ ಬಂಧನ ಬೆನ್ನಲ್ಲೇ ವಿದ್ಯುತ್ ಸಂಪರ್ಕ ಕಡಿತ: ಹೆಸ್ಕಾಂನಲ್ಲಿ ಜಮಾಯಿಸಿದ ಸಾರ್ವಜನಿಕರು

ರಬಕವಿ-ಬನಹಟ್ಟಿ : ಕಳೆದ 39 ದಿನಗಳಿಂದ ನಡೆಯುತ್ತಿರುವ ಪ್ರಜಾಸೌಧ ಹೋರಾಟದ ಉಪವಾಸ ನಿರತರನ್ನು ಪೊಲೀಸರು ಆಂಬ್ಯುಲೆನ್ಸ್ ಮೂಲಕ ಕರೆದೊಯ್ದ ಬೆನ್ನಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ನೂರಾರು ನಾಗರಿಕರು ಬನಹಟ್ಟಿಯ ಹೆಸ್ಕಾಂ ಕಚೇರಿಯತ್ತ ದೌಡಾಯಿಸಿ, ಏಕಾಏಕಿ ವಿದ್ಯುತ್ ಸಂಪರ್ಕ ಯಾಕೆ ಬಂದ್ ಮಾಡಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡರು.

ನೇಕಾರಿಕೆ ಉದ್ಯೋಗ ನಿಂತುಬಿಟ್ಟರೆ ಹೇಗೆ ಎಂದು ಆಕ್ರೋಶ ಹೊರಹಾಕುತ್ತಾ, ಸಂಪರ್ಕ ನೀಡುವವರೆಗೆ ಇಲ್ಲಿಂದ ತೆರಳುವುದಿಲ್ಲ ಎಂದು ಹಠಹಿಡಿದರು.

Edited By : PublicNext Desk
Kshetra Samachara

Kshetra Samachara

15/09/2026 11:39 am

Cinque Terre

540

Cinque Terre

0

ಸಂಬಂಧಿತ ಸುದ್ದಿ