ಬಾಗಲಕೋಟೆ : ವಿದ್ಯಾರ್ಥಿನಿಯೊಬ್ಬಳು ಶಾಸಕರ ಭೇಟಿ ವೇಳೆ ನಾನು SSLC ಯಲ್ಲಿ 100% ಮಾರ್ಕ್ಸ್ ತೆಗೆಯುತ್ತೀನಿ ಸರ್, ಮುಂದೆ ವಿದ್ಯಾಭ್ಯಾಸ ನೀವೇ ಮಾಡಿಸಬೇಕು ಅಂತ ಹೇಳಿರೋ ವಿಡಿಯೋ ವೈರಲ್ ಆಗುತ್ತಿದೆ. ಮುಂದುವರಿದು ನಾನು IAS ಮಾಡಬೇಕು ಎಂದು ಕಣ್ಣೀರು ಹಾಕಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದಲ್ಲಿ ನಡೆದಿದೆ.
ಬೀಳಗಿ ಶಾಸಕ ಜೆ. ಟಿ. ಪಾಟೀಲ್ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ರಸ್ತೆಯಲ್ಲಿ ನಿಂತಿದ್ದ ವಿದ್ಯಾರ್ಥಿಗಳನ್ನು ಕರೆದು ಮಾತನಾಡಿಸಿದರು. ಎಲ್ಲರೂ ಚೆನ್ನಾಗಿ ಓದಬೇಕು, 100ಕ್ಕೆ 100 ಪರ್ಸೆಂಟ್ ತೆಗೆಯಬೇಕು ಎಂದರು. ಈ ವೇಳೆ ಸರ್ ನಾನು ಮಾರ್ಕ್ಸ್ ತಗೋತೀನಿ ಅಂತ ಮುಂದೆ ಬಂದ ಭಾಗ್ಯಶ್ರೀ ಪಾಟೀಲ ಎಂಬ ವಿದ್ಯಾರ್ಥಿನಿ, ಮುಂದಿನ ವಿದ್ಯಾಭ್ಯಾಸ ನೀವೇ ಮಾಡಿಸಬೇಕು ಎಂದು ಬೇಡಿಕೆ ಇಟ್ಟು ಕಣ್ಣೀರು ಹಾಕಿದಳು. ವಿದ್ಯಾರ್ಥಿನಿ ಮಾತುಗಳನ್ನು ಆಶ್ಚರ್ಯದಿಂದ ಆಲಿಸಿದ ಜೆ. ಟಿ. ಪಾಟೀಲ್, ನೀನು ಇಷ್ಟು ಧೈರ್ಯದಿಂದ ಹೇಳ್ತೀಯಾ ಅಂದರೆ ಓದು, ನಾನು ಎಲ್ಲ ನೋಡ್ಕೋತೀನಿ ಎಂದು ತಲೆ ಮೇಲೆ ಕೈ ಇಟ್ಟು ಅಭಯ ನೀಡಿದರು. ಈ ವೇಳೆ ವಿದ್ಯಾರ್ಥಿನಿ ನಾನು ಐಎಎಸ್ ಆಗಬೇಕು ಸರ್ ಎನ್ನುತ್ತಲೇ, ವೆರಿ ಗುಡ್, ಸರಿ ಅಮ್ಮಾ ನಾನು ಸಹಾಯ ಮಾಡುತ್ತೀನಿ ಎಂದು ಶಾಸಕ ಜೆ. ಟಿ. ಪಾಟೀಲ ಭರವಸೆ ನೀಡಿದ್ದಾರೆ.
PublicNext
19/09/2026 04:29 pm
LOADING...