ರಬಕವಿ-ಬನಹಟ್ಟಿ : ತಾಲೂಕಿನ ಬನಹಟ್ಟಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯ ವಿಸರ್ಜನೆ ಅಂಗವಾಗಿ ವಿಶೇಷ ಪೂಜೆ ಹಾಗೂ ಪ್ರಸಾದ ಸೇವೆ ಜರುಗಿದವು.
ಐದನೇ ದಿನವಾದ ಶುಕ್ರವಾರದಂದು ಠಾಣೆಯ ಸಿಬ್ಬಂದಿ ಬಿಳಿ ಸಮವಸ್ತ್ರದಲ್ಲಿ ಮಿಂಚಿದರು. ವಿಸರ್ಜನೆಯ ಮೆರವಣಿಗೆಯಲ್ಲಿ ಪರಸ್ಪರ ಗುಲಾಲ ಎರಚಿ, ಪಟಾಕಿ ಸಿಡಿಸಿ, ಹಾಡಿಗೆ ಹೆಜ್ಜೆ ಹಾಕುತ್ತಾ ಗಣೇಶ ಹಬ್ಬವನ್ನು ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ಸಿಪಿಐ ಆರ್.ಆರ್. ಪಾಟೀಲ, ಪಿಎಸ್ಐ ಶಿವರಾಜ ಧರಿಗೊಂಡ, ಕ್ರೈಂ ಪಿಎಸ್ಐ ಪೂಜೇರಿ ಹಾಗೂ ಠಾಣೆಯ ಎಸ್ಐಗಳು ಮತ್ತು ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.
Kshetra Samachara
18/09/2026 05:33 pm
LOADING...