ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಡಿಗಣಿ ಶ್ರೀಗಳ ಸಾವು ಸಹಜವಲ್ಲ ಎನ್ನುವ ದೂರು; ಖಾಸಗಿ ಪ್ರಕರಣದ ವಿಚಾರಣೆಗೆ ಕೋರ್ಟ್ ಅಸ್ತು

ರಬಕವಿ-ಬನಹಟ್ಟಿ : ಬಂಡಿಗಣಿ ಶ್ರೀಗಳ ಸಾವಿನ ವಿಚಾರವಾಗಿ ಸಂದೇಹ ವ್ಯಕ್ತಪಡಿಸಿ ಅವರ ಪುತ್ರ ಶಿವಕುಮಾರ ಹಾಗೂ ಕುಟುಂಬಸ್ಥರು ದಾಖಲಿಸಿದ ಖಾಸಗಿ ಪ್ರಕರಣದ ವಿಚಾರಣೆಗೆ ಬನಹಟ್ಟಿ ಹಿರಿಯ ದಿವಾಣಿ ನ್ಯಾಯಾಲಯ ಅವಕಾಶ ನೀಡಿದೆ.

ತಮ್ಮ ತಂದೆಯ ಸಾವು ಸಹಜವಲ್ಲ, ಅದು ಕೊಲೆ. ಶ್ರೀಗಳ ಅನಾರೋಗ್ಯದ ನೈಜ ಸ್ಥಿತಿಯನ್ನು ಕುಟುಂಬಸ್ಥರು ಹಾಗೂ ಭಕ್ತರಿಂದ ಮುಚ್ಚಿಟ್ಟು, ಜತೆಗೆ ಚಿಕಿತ್ಸೆ ಕೊಡಿಸುವ ಬದಲು ಅವರನ್ನು ಮಠದಲ್ಲಿಯೇ ಇರಿಸಿಕೊಂಡು ಆಸ್ತಿಯನ್ನು ಕಬಳಿಸಲು 19 ಜನರು ಸಂಚು ರೂಪಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿ, ಅವರ ವಿರುದ್ಧ ಬನಹಟ್ಟಿ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ 2026ರ ಜೂನ್ 29ರಂದು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಪ್ರಕರಣ ಕುರಿತು ವಿಚಾರಣೆ ನಡೆಸಲು ತಿಳಿಸಿದೆ.

ಶ್ರೀಗಳು ಅನಾರೋಗ್ಯ ಸ್ಥಿತಿಯಲ್ಲಿದ್ದಾಗ 2025ರ ನವೆಂಬರ್ 26ರಿಂದ ಡಿಸೆಂಬರ್ 1ರವರೆಗಿನ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಒಂದು ಸಂಘದ ಹೆಸರಿನಲ್ಲಿ ಅವರಿಗೆ ಸಂಬಂಧಿಸಿದ ಕೋಟ್ಯಂತರ ರೂ. ಆಸ್ತಿಯನ್ನು ವರ್ಗಾಯಿಸುವ ಉದ್ದೇಶದಿಂದ ಮೃತ್ಯುಪತ್ರ ಸೃಷ್ಟಿಸಲಾಗಿದೆ ಎಂಬ ಆರೋಪ ಕೂಡ ದೂರಿನಲ್ಲಿದೆ.

Edited By : Somashekar
PublicNext

PublicNext

15/09/2026 04:16 pm

Cinque Terre

6.21 K

Cinque Terre

0

ಸಂಬಂಧಿತ ಸುದ್ದಿ