ರಬಕವಿ-ಬನಹಟ್ಟಿ : ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮೂರು ಹಂತದ ನ್ಯಾಯಾಲಯಗಳು ಸೇರಿದಂತೆ ಒಟ್ಟು 447 ಪ್ರಕರಣಗಳು ಇತ್ಯರ್ಥಗೊಂಡಿವೆ.
ಹಲವು ವರ್ಷಗಳಿಂದ ಕಲಹದಿಂದ ಬೇರ್ಪಟ್ಟಿದ್ದ ಎರಡು ಜೋಡಿಗಳನ್ನು ಹಿರಿಯ ದಿವಾಣಿ ನ್ಯಾಯಾಧೀಶ ಆಶಪ್ಪ ಸಣಮನಿ ಹಾಗೂ ದಿವಾಣಿ ನ್ಯಾಯಾಧೀಶ ಸೌಮ್ಯ ಹೂಲಿ ಅವರು ಒಂದುಗೂಡಿಸಿದ್ದಾರೆ.
ಹಿರಿಯ ದಿವಾಣಿ ನ್ಯಾಯಾಲಯದಲ್ಲಿ 434 ಪೈಕಿ 41 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟು ₹1,64,40,532 ಮೊತ್ತ ಸಂದಾಯವಾಗಿದೆ.
ಮಾನ್ಯ ಪ್ರಧಾನ ದಿವಾಣಿ ನ್ಯಾಯಾಲಯದಲ್ಲಿ 741 ಪೈಕಿ 166 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟು ₹38,32,394 ಮೊತ್ತ ಸಂದಾಯವಾಗಿದೆ.
1ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದಲ್ಲಿ 469 ಪೈಕಿ 240 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟು ₹7,28,941 ಮೊತ್ತ ಸಂದಾಯವಾಗಿದೆ.
ಲೋಕ ಅದಾಲತ್‌ನಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಆಶಪ್ಪ ಸಣಮನಿ, ದಿವಾಣಿ ನ್ಯಾಯಾಧೀಶ ಸೌಮ್ಯ ಹೂಲಿ, 1ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಮಾಫ್ರಿದ್ ಡಿಯಸ್ ಹಾಗೂ ಸಂಧಾನಕಾರರಾದ ಪಿ.ಎಸ್. ತಳವಾರ, ಮಹೇಶ ಕೆಂದೂಳಿ, ಶಿಲ್ಪಾ ಗೌಡಪ್ಪನವರ, ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಕಾರ್ಯದರ್ಶಿ ಆರ್.ಎಸ್. ಸಂಪಗಾವಿ, ವಕೀಲರಾದ ಎಂ.ಜಿ. ಕೆರೂರ, ಹರ್ಷವರ್ಧನ ಪಟವರ್ಧನ, ಬಸು ಬುಜರುಕ್, ಜಿ.ಡಿ. ಪಾಟೀಲ, ಎಸ್.ಎ. ಪಾಟೀಲ, ಅರ್ಜುನ ಜಿಡ್ಡಿಮನಿ, ಕಾಡೇಶ ನ್ಯಾಮಗೌಡ, ವಿನೋದ ಕೇಮನ್ನವರ, ಪ್ರಸನ್ನ ಬಾಣಕಾರ, ಎಂ.ಎನ್. ಕೋಪರ್ಡೆ ಭಾಗವಹಿಸಿದ್ದರು.
PublicNext
20/09/2026 11:32 am
LOADING...