ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಬಕವಿ-ಬನಹಟ್ಟಿ : ಅಹಿಂಸಾ ಶಾಲಾ ಮಕ್ಕಳು ಕ್ರೀಡೆಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

ರಬಕವಿ-ಬನಹಟ್ಟಿ (ತೇರದಾಳ) : 2026-27ನೇ ಸಾಲಿನ ಸಸಾಲಟ್ಟಿ ವಲಯ ಮಟ್ಟದ ಕ್ರೀಡಾಕೂಟಗಳು ತಾಲೂಕಿನ ಹಳಿಂಗಳಿ ಗ್ರಾಮದ ಶರಣಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಜರುಗಿದವು.

ಕ್ರೀಡಾಕೂಟದಲ್ಲಿ ಸ್ಥಳೀಯ ಅಹಿಂಸಾ ಪ್ರೌಢಶಾಲೆಯ ಬಾಲಕರ ವಾಲಿಬಾಲ್ ತಂಡವು ಪ್ರಥಮ ಹಾಗೂ ಖೋ-ಖೋ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ವೈಯಕ್ತಿಕ ಕ್ರೀಡೆಗಳಾದ ಗುಂಡು ಎಸೆತ, ಹ್ಯಾಮರ್ ಥ್ರೋ ಹಾಗೂ ಚಕ್ರ ಎಸೆತಗಳಲ್ಲಿ ಮಲಿಕಜಾನ ಅಲಾಸ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದಾರೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಆಶಿಫ್ ಮಲ್ಲಿಕ್ ಸಾಬ್ ನದಾಫ್ ಪ್ರಥಮ ಸ್ಥಾನ, ವಿದ್ಯಾರ್ಥಿನಿ ಚೇತನ ಕುಂತಿನಾಥ್ ಹನಗಂಡಿ 200 ಮೀ. ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದು ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ರಾಜು ನಂದೆಪ್ಪನವರ, ಆಡಳಿತ ಮಂಡಳಿಯ ಸದಸ್ಯರು, ಮುಖ್ಯಗುರುಗಳು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

18/09/2026 04:54 pm

Cinque Terre

840

Cinque Terre

0

ಸಂಬಂಧಿತ ಸುದ್ದಿ