ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮಖಂಡಿ: ಪತ್ರಕರ್ತರಿಂದ 6 ಗೋವುಗಳ ರಕ್ಷಣೆ – ಸಾರ್ವಜನಿಕರಿಂದ ಮೆಚ್ಚುಗೆ

ಜಮಖಂಡಿ: ಮಹಾರಾಷ್ಟ್ರದಿಂದ 6 ಗೋವುಗಳನ್ನು ಸಾಗಿಸಿಕೊಂಡು ಕೇರೂರ ಕಡೆಗೆ ತೆರಳುತ್ತಿದ್ದ ವಾಹನವನ್ನು ಸಾವಳಗಿ ಸಮೀಪ ಪತ್ರಕರ್ತರು ತಡೆದು ಪರಿಶೀಲನೆ ನಡೆಸಿದ್ದಾರೆ.

ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ವಾಹನವನ್ನು ತಡೆದು, ಗೋವುಗಳನ್ನು ರಕ್ಷಿಸಿ ವಾಹನವನ್ನು ಸಾವಳಗಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಘಟನೆಯ ಕುರಿತು ಸಾವಳಗಿ ಪೊಲೀಸರು ವಾಹನ ಹಾಗೂ ಗೋವುಗಳ ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಸಂಕಷ್ಟದಲ್ಲಿದ್ದ ಗೋವುಗಳನ್ನು ರಕ್ಷಿಸಲು ಮುಂದಾದ ಪತ್ರಕರ್ತರ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಹಿತದ ಜೊತೆಗೆ ಪ್ರಾಣಿ ರಕ್ಷಣೆಯಲ್ಲಿಯೂ ಪತ್ರಕರ್ತರು ತೋರಿದ ಕಾಳಜಿಗೆ ಅಭಿನಂದನೆಗಳು ವ್ಯಕ್ತವಾಗಿವೆ.

ವರದಿ: ವಿನೋದ ಸೂರಗೊಂಡ, ಪಬ್ಲಿಕ್ ನೆಕ್ಸ್ಟ್, ಜಮಖಂಡಿ

Edited By :
PublicNext

PublicNext

20/09/2026 10:25 am

Cinque Terre

3.23 K

Cinque Terre

0

ಸಂಬಂಧಿತ ಸುದ್ದಿ